ಕೃಷ್ಣರಾಜಪೇಟೆ ಪಟ್ಟಣದ ಮಿನಿವಿಧಾನಸೌಧದ ಸಮೀಪ ಜೀರ್ಣೋದ್ಧಾರ ವಾಗುತ್ತಿರುವ ಶ್ರೀಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನಕ್ಕೆ ದಾನಿಗಳಾದ ಶ್ರೀಮತಿ ಅನುರಾಧನೀಲೇಗೌಡ ಅವರು ಕೊಡುಗೆಯಾಗಿ ನೀಡಿದ ಸಾಲಿಗ್ರಾಮ ಶಿಲೆಯ ಒಂದು ಲಕ್ಷರೂ ಬೆಲೆಬಾಳುವ ೩ ಅಡಿ ಎತ್ತರದ ಅಭಯ ಆಂಜನೇಯಸ್ವಾಮಿ ವಿಗ್ರಹವನ್ನು ತಹಶೀಲ್ದಾರ್ ಎಂ.ಶಿವಮೂರ್ತಿ ಸ್ವೀಕರಿಸಿದರು …
ಹೇಮಾವತಿ ಜಲಾಶಯ ಯೋಜನಾ ಕಛೇರಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿದ್ದು ಭದ್ರಾವತಿಯಲ್ಲಿ ನೆಲೆಸಿರುವ ಅನುರಾಧನೀಲೇಗೌಡ ದಂಪತಿಗಳು ಪುನರ್ ನಿರ್ಮಾಣವಾಗುತ್ತಿರುವ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯಕ್ಕೆ ಆಂಜನೇಯಸ್ವಾಮಿಯ ಮೂರ್ತಿಯನ್ನು ಕೊಡಿಸುವುದಾಗಿ ದೇವಾಲಯದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ನಾರಾಯಣಾಚಾರ್ಯರಿಗೆ ಆಶ್ವಾಸನೆ ನೀಡಿದ್ದಂತೆ ಕೆ.ಆರ್.ಪೇಟೆಗೆ ಮೂರ್ತಿಯನ್ನು ತಂದು ದಿವಂಗತ ನೀಲೇಗೌಡರ ಪುತ್ರ ಅನಿಲ್ ತಹಶೀಲ್ದಾರ್ ಅವರ ಮೂಲಕ ದೇವಸ್ಥಾನಕ್ಕೆ ನೀಡಿದರು..
ಈ ಸಂದರ್ಭದಲ್ಲಿ ದೇವಾಲಯ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಚಂದ್ರಕಲಾ, ಸದಸ್ಯರಾದ ಪರಿಮಳ, ನಾಗರತ್ನ, ಡಿ.ಪ್ರೇಮಕುಮಾರ್, ಕೆ.ಆರ್.ನೀಲಕಂಠ ಮತ್ತಿತರರು ಉಪಸ್ಥಿತರಿದ್ದರು….
ದೇವಾಲಯದ ಜೀರ್ಣೋದ್ಧಾರ ಕಾಮಗಾರಿಯು ನಡೆಯುತ್ತಿರುವುದರಿಂದ ಶ್ರೀ ಆಂಜನೇಯಸ್ವಾಮಿಯ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸಿ ಮೂರ್ತಿಯನ್ನು ಭತ್ತದ ರಾಶಿಯಲ್ಲಿ ಮುಚ್ಚಿ ಸಂರಕ್ಷಿಸಿ ಸುರಕ್ಷಿತವಾಗಿ ಇಡಲಾಯಿತು…
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.