December 6, 2024

Bhavana Tv

Its Your Channel

ಬಳಕೂರಿನ ಗಣೇಶ ಆರ್ಚಾಯಗೆ ಒಲಿದು ಬಂದ ಶಿಲ್ಪಕಲಾ ಆಕಾಡೆಮಿ ಪುರಸ್ಕಾರ.

ಹೊನ್ನಾವರ ತಾಲೂಕಿನ ಬಳ್ಕೂರಿನ ೯೦ ವಯಸ್ಸಿನ ಹಿರಿಯ ಕಲಾವಿದರಾದ ಗಣೇಶ ಆಚಾರ್ಯ ೨೦೧೯ನೇ ಸಾಲಿನ ರಾಜ್ಯ ಶಿಲ್ಪಕಲಾ ಆಕಾಡೆಮಿ ಗೌರವ ಪ್ರಶಶ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಂಸ್ಕೃತಿ ಸಚೀವರಾದ ಸಿ.ಡಿ.ರವಿ ಹಾಗೂ ಸಾಮಾಜಿಕ ಚಿಂತಕ ಚಿರಂಜೀವಿ ಸಿಂಗ್ ಸಮ್ಮೂಖದಲ್ಲಿ ಗೌರವ ಸ್ವೀಕರಿಸಿದ್ದಾರೆ. ೪ನೇ ತರಗತಿ ಅಧ್ಯಯನ ನಡೆಸಿರುವ ಶ್ರೀಯುತರು ಮಣ್ಣಿನ ಮೂರ್ತಿ ತಯಾರಿ, ಕಾವ್ಯ ಶಿಲ್ಪ ಕೆತ್ತನೆಯಲ್ಲಿ ತೊಡಗಿಕೊಂಡಿದ್ದರು. ಶಿಲ್ಪಮೂರ್ತಿಗಳನ್ನು, ರಥಗಳನ್ನು ನಿರ್ಮಿಸುವ ಜೊತೆ ದೇವಾ ಲಯದ ಮಹಾದ್ವಾರಗಳ ನಿರ್ಮಾಣ ನೇರವೇರಿಸಿದದ್ದರು. ನಾಡಿನ ಅನೇಕ ಮಂದಿರಗಳಲ್ಲಿ ಇವರ ಶಿಲ್ಪಕಲೆಯನ್ನು ನಾವು ಕಣ್ಣುತುಂಬಿಕೊಳ್ಳಬಹುದು. ಅಲ್ಲದೇ ಸಂಗೀತ, ಹಾರ್ಮೋನಿಯಂ, ತಬಲಾದಲ್ಲಿಯೂ ಆಸಕ್ತಿ ಹೊಂದಿದ್ದರು. ಶಿಲ್ಪಕಲೆಯನ್ನು ಮುಮದಿನ ತಲೆಮಾರಿಗೆ ಪರಿಚಯಿಸುವ ನಿಟ್ಟಿನಲ್ಲಿ ಶಿಲ್ಪಕಲಾಕೇಂದ್ರವನ್ನು ತೆರೆದು ಆಸಕ್ತರಿಗೆ ತರಬೇತಿ ನೀಡುತ್ತಿದ್ದಾರೆ.

error: