September 17, 2024

Bhavana Tv

Its Your Channel

ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್

ಜಿಲ್ಲೆಯ ಪ್ರವಾಸದ್ಯೋಮ್ಯಕ್ಕೆ ಇನ್ನಷ್ಟು ಮೆರಗು, ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ ಕಾಸರಕೋಡ್ ಇಕೋ ಬೀಚ್, ರಾಜ್ಯದ ಏಕೈಕ ಬ್ಲೂಫ್ಲಾö್ಯಗ್ ಎನ್ನುವ ಹಿರಿಮೆಯ ಗರಿ


ಇಷ್ಟು ದಿನ ದೂರದ ಮಂಗಳೂರು, ಕಾÀರವಾರದ ಕಡಲತೀರಗಳು ಹೆಚ್ಚಿನ ಮನ್ನಣೆಯ ಮೇಲೆ ಪ್ರವಾಸಿಗರಿಂದ ಜಿನಗುತ್ತಿದ್ದರೆ ಅಂತಹ ಅವಕಾಶ ನಮ್ಮ ಹೊನ್ನಾವರಕ್ಕೂ ಒದಗಿ ಬಂದಿದೆ. ತಾಲೂಕಿನ ಅಪ್ಸರಕೊಂಡ ಇಡಗುಂಜಿ ಪ್ರವಾಸಿಕೇಂದ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿನಿತ್ಯ ಆಗಮಿಸುತ್ತಿದ್ದರು. ಇಂದು ಈ ಪ್ರವಾಸಿ ಕೇಂದ್ರದ ಸನಿಹದಲ್ಲೆ ಕಡಲತೀರವೊಂದು ಸಕಲ ಸೌಕರ್ಯದೊಂದಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರ ಕೈಬೀಸಿ ಕರೆಯುತ್ತಿದೆ. ಅಂತರಾಷ್ಟಿçÃಯ ಪ್ರವಾಸೋದ್ಯಮಕ್ಕೆ ಸಜ್ಜಾಗುತ್ತಿರುವ ಕಾಸರಕೋಡ ಕಡಲತೀರ ೮ ಕೋಟಿ ವೆಚ್ಚದಲ್ಲಿ ೭೫೦ ಮೀಟರ ಉದ್ದ ಸಂರ್ಪೂಣ ಸಿ ಸಿ ಟಿವಿ ಕಣ್ಣಗಾವಲು ಹಾಗೂ ಸಕ್ಯೂರಿಟಿ ಗಾಡ್ ವ್ಯವಸ್ಥೆಯಲ್ಲಿ ನಿರ್ಮಾಣವಾಗುತ್ತಿದೆ. ಬ್ಲೂö್ಯ ಫ್ಲಾಗ್ ಸರ್ಟಿಫಿಕೇಟ್ ಪಡೆದ ರಾಷ್ಟçದ ೧೩ ಬೀಚ್‌ಗಳಲ್ಲಿ ಒಂದಾಗಿರುವ ಕಾಸರಕೋಡ ಬೀಚ್ ಸಮುದ್ರತೀರದಲ್ಲಿ ಪ್ರವಾಸಿಗರ ಅನುಕೂಲಕ್ಕೆ ಅಂತರಾಷ್ಟಿçÃಯ ಗುಣಮಟ್ಟದ ಸೌಕರ್ಯಗಳನ್ನು ಕಲ್ಪಿಸುವ ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದೆ.
ಇಕೋ ಟೂರಿಸಂ ಮಾಡೆಲ್‌ನ ಈ ಸರ್ಟಿಫಿಕೇಟ್ ಮಾನ್ಯತೆಯನ್ನು ವಿಶ್ವದ ೪೯ ರಾಷ್ಟçಗಳ ೪೦೦೦ ಬೀಚ್‌ಗಳು ಪಡೆದುಕೊಂಡಿದೆ. ಅದರಲ್ಲಿ ಭಾರತದ ಕೇವಲ ೧೩ ಬೀಚ್‌ಗಳು ಮಾತ್ರ ಬ್ಲೂö್ಯ ಫ್ಲಾಗ್ ಮಾನದಂಡಗಳನ್ನು ಪೂರೈಸುವ ಗುಣಮಟ್ಟವನ್ನು ಹೊಂದಿದೆ. ಅವುಗಳಲ್ಲಿ ಹೊನ್ನಾವರದ ಕಾಸರಕೋಡ ಬೀಚ್ ಒಂದಾಗಿರುವುದು ಈ ಭಾಗದ ಪ್ರವಾಸೋದ್ಯಮವನ್ನು ಹೊಸ ದಿಕ್ಕಿನತ್ತ ಮುನ್ನಡೆಸುವ ಸೂಚನೆ ಸಿಕ್ಕಿದೆ.
ಶುಭ್ರ ಮರಳು. ಸ್ನಾನ ಯೋಗ್ಯ ನೀರು, ಸ್ವಚ್ಛ ಕಡಲತೀರ, ಸುರಕ್ಷತಾ ಕ್ರಮಗಳು, ಭದ್ರತಾ ವ್ಯವಸ್ಥೆ, ಕಡಲ ತೀರದ ನಿರಂತರ ನಿರ್ವಹಣೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಸ್ಥಳೀಯ ಆಹಾರ, ಜೀವನ ಶೈಲಿಗಳನ್ನು ಪ್ರವಾಸಿಗರಿಗೆ ಪರಿಚಯಿಸುವಂತ ಮಹತ್ವದ ಅಂಶಗಳನ್ನು ಒಳಗೊಂಡಿರುವ ಯೋಜನೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಅನುಷ್ಠಾವಾಗಿದ್ದು ಕೆಲಸ ನಡೆಯುತ್ತಿದೆ.
ಈಗಾಗಲೇ ವೀಕ್ಷಣಾ ಗೋಪುರ, ಶೌಚಾಲಯ, ಸ್ನಾನಗೃಹ, ವಾಕಿಂಗ್ ಪಾತ್‌ಗೆ ಇಂಟರ್‌ಲಾಕ್, ಲೈಟಿಂಗ್, ಸೋಲಾರ್ ಪ್ಯಾನಲ್‌ಗಳ ಅಳವಡಿಕೆಯಾಗಿದೆ. ಎಲ್ಲಿಯೂ ಕಸ ಕಡ್ಡಿಗಳು ಬೀಳದಂತೆ ಮರ‍್ನಾಲ್ಕು ಮಂದಿ ಸ್ವಚ್ಛತೆಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಸದಾ ಸ್ಥಳಿಯ ಪ್ರವಾಸಿಗರಿಂದಲೇ ತುಂಬಿರುತ್ತಿದ್ದ ಇಕೋ ಪಾರ್ಕ ಮತ್ತು ಇಕೋ ಬೀಚ್‌ನಲ್ಲಿ ಇನ್ನು ಮುಂದೆ ವಿದೇಶಿ ಪ್ರವಾಸಿಗರ ಕಲರವಕ್ಕೆ ಸಾಕ್ಷಿಯಾಗಲಿದೆ. ಈ ಹಿನ್ನಲೆಯಲ್ಲಿ ತಾಲೂಕಿನ ಪ್ರವಾಸೋದ್ಯಮ ಬೆಳೆದಂತೆ ಪೂರಕವಾಗಿ ಜನರಿಗೆ ಉದ್ಯೋಗಾವಕಾಶಗಳು ತೆರೆದುಕೊಳ್ಳಲಿವೆ ಎನ್ನುವ ನಿರೀಕ್ಷೆ ತಾಲೂಕಿನ ಜನರಲ್ಲಿ ಮನೆಮಾಡಿದೆ.
ಈ ಬಗ್ಗೆ ಸುಪರವೈಸರ್ ವಿನೋದ ಮಾತನಾಡಿ ಕೇಂದ್ರ ಸರ್ಕಾರÀ ದೇಶದ ೧೨ ಬಿಚ್‌ಗಳನ್ನು ಆಯ್ಕೆ ಮಾಡಿದೆ ಅದರಲ್ಲಿ ಹೊನ್ನಾವರ ಕಾಸರಕೋಡಿನ ಇಕೋ ಬಿಚ್ ಕೂಡಾ ಒಂದುೆ. ಹಲವು ಸೌಕರ್ಯಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು. ಎಲ್ಲಾ ವಯಸ್ಸಿನವರು ಆಗಮಿಸಬಹುದಾಗಿದ್ದು. ಪ್ರವಾಸಿಗರಿಗೆ ಕುಡಿಯುವ ನೀರು, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೆಕವಾಗಿ ಡ್ರಸ್ ಕೋಠಡಿ, ಶೌಚಾಲಯ, ಮಕ್ಕಳ ಆಟ ಆಡಲು ವಿವಿಧ ಬಗೆಯ ಸಾಮಗ್ರಿ, ವಾಯುವಿಹಾರ ಸೂಕ್ತ ಸ್ಥಳ ಕೂಡಾ ಹೊಂದಿದೆ. ಅಲ್ಲದೇ ಸಮುದ್ರದ ತೆರೆಯನ್ನು ಕೂಡಾ ವಿಕ್ಷಿಸಲು ಸೂಕ್ತ ಆಸನಗಳ ವ್ಯವಸ್ಥೆ ಕೂಡಾ ನಿರ್ಮಿಸಲಾಗಿದೆ ಎಂದರು.
ಜಿಲ್ಲೆಯ ಪ್ರವಾಸೊದ್ಯಮ ಅಭಿವೃದ್ದಿ ಹೊಂದಲು ಇದು ಫೇವರೇಟ್ ಸ್ಥಳವಾಗಿದ್ದು ಪ್ರತಿನಿತ್ಯ ಜಿಲ್ಲೆ ಹೊರ ಜಿಲ್ಲೆಯಿಂದ ಅಲ್ಲದೇ ಹೊರ ರಾಜ್ಯ ವಿದೇಶದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಮುಂಬರುವ ದಿನದಲ್ಲಿ ಇನ್ನಷ್ಟು ಸೌಕರ್ಯದೊಂದಿಗೆ ಜಗತ್ತಿನೆಲ್ಲಡೆ ಈ ಸ್ಥಳ ಚಿರಪರಿಚಿತವಾಗಲಿ ಎಂದು ಶುಭ ಹಾರೈಸೋಣ
ವಿಶ್ವನಾಥ ಸಾಲ್ಕೋಡ್

error: