March 13, 2025

Bhavana Tv

Its Your Channel

ಕಾರೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಧಗಧಗನೇ ಹೊತ್ತಿ ಉರಿದು ಸ್ಥಳದಲ್ಲಿ ಆತಂಕ

ಭಟ್ಕಳ: ತಾಲ್ಲೂಕಿನ ಬೈಲೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಧಗಧಗನೇ ಹೊತ್ತಿ ಉರಿದ ಪರಿಣಾಮ ಕೆಲಕಾಲ ಸ್ಥಳದಲ್ಲಿ ಆತಂಕ ಸೃಷ್ಠಿಯಾಗಿತ್ತು. ಹೊನ್ನಾವರ ತಾಲ್ಲೂಕು ನಿವಾಸಿ ಸಂತೋಷ ಜನಾರ್ಧನ ಆಚಾರಿ ಎನ್ನುವ ಕಾರಿನ ಮಾಲಿಕರು ಭಟ್ಕಳದಿಂದ ಹೊನ್ನಾವರಕ್ಕೆ ತೆರಳುವಾಗ ಕಾರಿನ ಮುಂಭಾಗದಲ್ಲಿರುವ ಬ್ಯಾಟರಿ ಶಾರ್ಟ ಸರ್ಕ್ಯೂಟ್ ನಿಂದ ಈ ಘಟನೆ ಸಂಭವಿಸಿದೆ. ಬೆಂಕಿ ಹೊತ್ತುಕೊಂಡ ತಕ್ಷಣ ಚಾಲಕ ಕಾರಿನಿಂದ ಇಳಿದು ಬಚಾವ್ ಆಗಿದ್ದಾರೆ. ಎಲ್.ಪಿ.ಜಿ ಅಳವಡಿಕೆ ಕಾರು ಇದಾಗಿದ್ದು, ಸಕಾಲದಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದರಿAದ ಯಾವುದೇ ಸ್ಪೋಟ ಸಂಭವಿಸಿಲ್ಲ. ಅಗ್ನಿಶಾಮಕ ದಳದ ಇನ್ಸಪೇಕ್ಟರ ರಮೇಶ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಭಾಗವಹಿಸಿದ್ದರು.

error: