December 22, 2024

Bhavana Tv

Its Your Channel

ಯುಪಿಎಸ್‌ಸಿ ಪರೀಕ್ಷೆಯಲ್ಲಿ ರೈತ ಮಗನ ಸಾಧನೆ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಳ್ಳದ ಮಾದಹಳ್ಳಿ ಗ್ರಾಮದ ಪ್ರಮೋದ್ ಆರಾಧ್ಯ ರವರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ತೆಗೆದಿರುವ ಹಿನ್ನೆಲೆಯಲ್ಲಿ ಶಾಸಕರಾದ ಸಿಎಸ್ ನಿರಂಜನ್ ಕುಮಾರ್ ರವರು ಅವರ ಸ್ವಗ್ರಾಮಕ್ಕೆ ತೆರಳಿ ಸನ್ಮಾನವನ್ನು ಮಾಡಿ ಅಭಿನಂದನೆ ತಿಳಿಸಿದರು ನಂತರ ಮಾತನಾಡಿ ತಾಲೂಕಿಗೆ ನೀವು ಮಾಡಿರುವ ಸಾಧನೆ ಒಂದು ಹೆಮ್ಮೆಯ ವಿಷಯ ಮತ್ತು ಮಕ್ಕಳ ಮುಂದಿನ ಭವಿಷ್ಯವೇ ಅಪ್ಪ-ಅಮ್ಮನಿಗೆ ದೊಡ್ಡದು ಅದನ್ನು ಬಿಟ್ಟರೆ ಇನ್ಯಾವುದಿದೆ ಎಂದರು
ಪ್ರಮೋದ್ ಮಾತನಾಡಿ ಕಳೆದ ಬಾರಿ ಪರೀಕ್ಷೆ ಯಲ್ಲಿ ಅಂಕಗಳು ಕಡಿಮೆಯಾದವು ಆದರೆ ಈ ಬಾರಿ ಅಂಕಗಳು ಬಂದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಸಿಎಸ್. ನಿರಂಜನ್ ಕುಮಾರ್ , ಯುಪಿಎಸ್ಸಿ ತೇರ್ಗಡೆ ಅಭ್ಯರ್ಥಿ ಪ್ರಮೋ ದ್ ಆರಾಧ್ಯ , ಎಸ್ಸಿ ಮಂಜುನಾಥ್, ಸಿ. ಮಹದೇವಪ್ರಸಾದ್, ಎಚ್. ವಿ .ಮಂಜು ,ಎಚ್ ಎಂ ನಂದೀಶ್, ಅಭಿಷೇಕ್ , ಎಸ್ ಬಸವಣ್ಣ, ಮಹೇಂದ್ರ ನಮೋ ಮಂಜು, ಇನ್ನು ಮುಂತಾದವರು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: