December 22, 2024

Bhavana Tv

Its Your Channel

ರೈತರಿಗೆ ಬೆಳೆ ಸಾಲ ವಿತರಣೆ ಕಾರ್ಯಕ್ರಮ

ಚಾಮರಾಜನಗರ ಗುಂಡ್ಲುಪೇಟೆ ತಾಲೂಕಿನ ಪುತ್ತನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ರಿ) ದ ವತಿಯಿಂದ ರೈತರಿಗೆ ಬೆಳೆ ಸಾಲ ವಿತರಣೆ ಕಾರ್ಯಕ್ರಮ ನಡೆಯಿತು.

ಮೈಸೂರು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಎಂ ಪಿ ಸುನೀಲ್‌ರವರು ಕಾರ್ಯಕ್ರಮ ಉದ್ಘಾಟಿಸಿದರು, ನಂತರ ಮಾತನಾಡಿ ರೈತರಿಗೆ ಸಹಕಾರ ಸಂಘವೂ ನಾನಾ ಅನುಕೂಲ ಮತ್ತು ಸಾಲ ಸೌಲಭ್ಯವನ್ನು ನೀಡುತ್ತಿದೆ ಅದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಮತ್ತು ಜಿಲ್ಲೆಯ ೩ ತಾಲೂಕು ಗಳಿಗಿಂತ ಗುಂಡ್ಲುಪೇಟೆ ತಾಲೂಕಿಗೆ ಅತಿಹೆಚ್ಚು ಸಾಲವನ್ನು ನೀಡಲಾಗಿದೆ ಹಾಗಾಗಿ ನಮ್ಮ ಒಬ್ಬರ ಪರಿಶ್ರಮ ಅಲ್ಲ ಸಹಕಾರ ಎಲ್ಲರದ್ದು ಇದೆ ಎಂದು ತಿಳಿಸಿದರು,
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪಿ. ಬಿ. ರಾಜಶೇಖರ್ ಮಾತನಾಡಿ ಹೊಸದಾಗಿ ೮೯ ಹೊಸ ಸದಸ್ಯರಿಗೆ ಬೆಳೆ ಸಾಲ ವಿತರಣೆ ಸುಮಾರು ೭೦,೮೪,೦೦೦.ರೂ ಸಾಲವನ್ನು ನೀಡಲಾಗಿದೆ. ಈ ದಿನದ ಸಂಘದ ಕೆಸಿಸಿ ಒಟ್ಟು ಹೊರಬಾಕಿ ೨೮,೦೨,೦೦೦ ರೂ ಹಾಗೂ ಕೆಸಿಸಿ ಮತ್ತು ಎ೦ ಟಿ ಎಲ್. ಸುಸ್ತಿ ೮ ಸದಸ್ಯರಿಂದ ರೂ ೧೩,೫೭,೦೦೦, ಮಧ್ಯಮಾವಧಿ ಸಾಲ ಸಂಘದ ಒಟ್ಟು ಹೊರ ಬಾಕಿ ರೂ ೩,೩೦,೮೧,೦೦೦ ಸಂಘದಿAದ ನೀಡಲಾಗಿದೆ, ೨೩ಜನ ಸದಸ್ಯರಿಗೆ ಮಧ್ಯಮಾವಧಿ ಸಾಲ ಬಿಡುಗಡೆ ಒಟ್ಟು ಮೊತ್ತ ೫೯,೩೧,೦೦೦ ರೂ ಬಿಡುಗಡೆಯಾಗಿದೆ. ಈಗ ನಮ್ಮ ಸಂಘದಿAದ ರೈತರಿಗೆ ಬಡ್ಡಿರಹಿತ ಸಾಲವನ್ನು ೩ ಲಕ್ಷದವರೆಗೆ ನೀಡಲಾಗುತ್ತಿದ್ದು ಅದನ್ನು ೫ ಲಕ್ಷಕ್ಕೆ ಏರಿಕೆ ಮಾಡಬೇಕೆಂದು ಈ ಮೂಲಕ ಅಧ್ಯಕ್ಷರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾಡ ಮಾಜಿ ಅಧ್ಯಕ್ಷರಾದ ಎಚ್ ಎಸ್ ನಂಜಪ್ಪನವರು, ಮೈಸೂರು-ಚಾಮರಾಜನಗರ ಜಿಲ್ಲಾ ಕೇಂದ್ರದ ನಿರ್ದೇಶಕರಾದ ಎಂಪಿ ಸುನಿಲ್, ಪಿಎಸಿಸಿ ಬ್ಯಾಂಕ್ ಅಧ್ಯಕ್ಷರಾದ ಪಿಬಿ ರಾಜಶೇಖರ್, ಉಪಾಧ್ಯಕ್ಷರಾದ ದೊಡ್ಡಪ್ಪ, ನಿರ್ದೇಶಕರುಗಳಾದ ಮಂಜಪ್ಪ ,ಶಿವಣ್ಣ ,ಪವಿತ್ರ ಕುಮಾರ್ ,ಮಂಜುನಾಥ್ ಕೆಂಪಣ್ಣ ,ಮಂಗಳಮ್ಮ ,ಮತ್ತು ಇಂದಿರಾ, ಈಶ್ವರ ,ಕುಮಾರ ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ್ ಹಾಗೂ ಬ್ಯಾಂಕಿನ ಮೇಲ್ವಿಚಾರಕರು ನೌಕರರು ಗ್ರಾಮಸ್ಥರು ಹಾಜರಿದ್ದರು.
ವರದಿ:ಸದಾನ೦ದಾ ಕನ್ನೆಗಾಲ, ಗುಂಡ್ಲಪೇಟೆ

error: