December 19, 2024

Bhavana Tv

Its Your Channel

ಗುಂಡ್ಲುಪೇಟೆ ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಇದೆ-ರೈತ ಮುಖಂಡ ಕಡಬೂರು ಮಂಜುನಾಥ್

ಗುಂಡ್ಲುಪೇಟೆ ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಇದೆ ಎಂದು ರೈತ ಮುಖಂಡರಾದ ಕಡಬೂರು ಮಂಜುನಾಥ ಆರೋಪಿಸಿದರು. ಅದರ ಅಂಗವಾಗಿ ರಸಗೊಬ್ಬರಗಳ ಆದ ಯೂರಿಯಾ, ಫೋಟೋಸ್, ವಿವಿಧ ರೀತಿಯ ಕಾಂಪ್ಲೆಕ್ಸ್ ಗೊಬ್ಬರಗಳ ಕೊರತೆ ಇದೆ ಇದನ್ನು ನೀಗಿಸಬೇಕು. ಮತ್ತು ಕೃಷಿ ಅಧಿಕಾರಿಗಳು ಮುಂಜಾಗ್ರತ ಕ್ರಮ ವಹಿಸಬೇಕು. ಅಗತ್ಯವಿರುವ ಸಂದರ್ಭದಲ್ಲಿ ಸಿಗುವುದಿಲ್ಲ ಅಗತ್ಯವಿಲ್ಲದಿರುವಾಗ ಸಿಗುತ್ತದೆ. ಒಂದು ರೀತಿಯಲ್ಲಿ ರೈತರಿಗೆ ನಿಗದಿತ ಸಮಯಕ್ಕೆ ಸಿಗುವಂತಾಗಬೇಕು ಇದನ್ನು ಸರಿಪಡಿಸಬೇಕು . ಎಂದು ಮಾಧ್ಯಮದವರ ಮೂಲಕ ಕೃಷಿ ಸಹಾಯಕ ನಿರ್ದೇಶಕರಿಗೆ ಮಾಹಿತಿ ನೀಡಿದರು.
ಇದಕ್ಕೆ ಸ್ಪಂದಿಸಿದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದ ಎಸ್ ರಂಗಸ್ವಾಮಿ ರವರು ಮಾತನಾಡಿ ರಸಗೊಬ್ಬರದ ಬಗ್ಗೆ ಮಾಹಿತಿ ನೀಡಿದರು

ವರದಿ:ಸದಾನ೦ದ ಕನ್ನೆಗಾಲ ಗುಂಡ್ಲುಪೇಟೆ.

error: