December 20, 2024

Bhavana Tv

Its Your Channel

ಗುರು ರಾಯರ ಮಠದ ವತಿಯಿಂದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ಪ್ರತಿಷ್ಠಾಪನೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಗುರುರಾಯರ ಮಠದ ವತಿಯಿಂದ ಶ್ರೀರಾಮದೇವರ ಗುಡ್ಡದ ತಪ್ಪಲಿನಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹ ನೆನ್ನೆ ತಿರುಮಲ ತಿರುಪತಿ ದೇವಸ್ಥಾನದಿಂದ ಗುಂಡ್ಲುಪೇಟೆ ತಲುಪಿದ್ದು ಗಡಿಯಲ್ಲಿ ತಾಲೂಕು ಬ್ರಾಹ್ಮಣ ಸಮಾಜ ಮಹಿಳಾ ವಿಪ್ರ ಬಳಗದ ವತಿಯಿಂದ ಪೂರ್ಣ ಕುಂಭ ಸ್ವಾಗತ ಕೋರಿ ಬರಮಾಡಿಕೊಂಡು ಪೂಜಾ ಕಾರ್ಯವನ್ನು ಕೈಗೊಂಡರು.

ಪಟ್ಟಣದ ಪ್ರಮುಖ ಬೀದಿಯಲ್ಲಿ ಪಂಚಮುಖಿ ಆಂಜನೇಯ ಸ್ವಾಮಿ ವಿಗ್ರಹವನ್ನು ಮೆರವಣಿಗೆಯ ಮೂಲಕ ರಾಯರ ಮಠಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಮಠದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಚಂದ್ರಶೇಖರ್ , ಪುರಸಭೆ ಅಧ್ಯಕ್ಷರಾದ ಪಿ. ಗಿರೀಶ್, ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್, ಸದಸ್ಯರುಗಳು, ಮಾಜಿ ಪುರಸಭಾ ಅಧ್ಯಕ್ಷರಾದ ಎಲ್ ಸುರೇಶ್, ಪಂಡಿತ್ ಮುರಳಿಧರನ್, ಹಾಗೂ ಬ್ರಾಹ್ಮಣ ಸಮಾಜದ ಮುಖಂಡರುಗಳು ಭಕ್ತಾದಿಗಳು ಹಾಜರಿದ್ದರು.

ವರದಿ: ಸದಾನ೦ದ ಕನ್ನೇಗಾಲ ಗುಂಡ್ಲುಪೇಟೆ

error: