ಬಾದಾಮಿ: ಇಂದು ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ ಸರಕಾರಿ ಪ್ರೌಢಶಾಲೆ ಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಡದೇವಿ ಶ್ರೀ ಭುವನೇಶ್ವರಿ ದೇವಿಯ ಪೋಟೊವನ್ನು ಪೂಜೆ ಮಾಡುವುದರ ಮೂಲಕ ೮ ರಿಂದ ೧೦ ನೇ ತರಗತಿಯ ಶಾಲೆ ಮಕ್ಕಳಿಗೆ ಮಾರುತಿ ಮೆಡಿಕಲ್ಸ್ ರವರಿಂದ ೩೦೦ ನೋಟು ಪುಸ್ತಕ ಮತ್ತು ಪೆನ್ಸಿಲ್ ಸಾಮಗ್ರಿ ಗಳನ್ನು ಸೇವಾ ಜನನಿ ಫೌಂಡೇಶನ್ ಸೇವಾ ಕಾರ್ಯದಲ್ಲಿ ಉಚಿತವಾಗಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಯಾಗಿ ಕರೆದು ಹಲವಾರು ಯೋಜನೆಗಳನ್ನು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರೌಢಶಾಲೆಗೆ ಒಂದು ಗ್ರಂಥಾಲಯದ ಅವಶ್ಯಕತೆ ಇದೆ.ಆದ್ದರಿಂದ ಮುಂದಿನ ದಿನಗಳಲ್ಲಿ ಅದನ್ನು ನಮ್ಮ ಶಾಲೆಗೆ ಮಾಡಿ ಕೊಡಬೇಕೆಂದು ಗ್ರಾಮದ ಗುರು ಹಿರಿಯರು, ಎಸ್ ಎಮ್ ಡಿಸಿಅಧ್ಯಕ್ಷರು, ಶಾಲೆ ಪ್ರದಾನ ಗುರುಗಳು, ಶಿಕ್ಷಕರು ಹಾಗೂ ಯುವ ಮಿತ್ರರು ತಿಳಿಸಿದರು.
ಸರಕಾರ ಮತ್ತು ಖಾಸಗಿ ಕಂಪನಿ ಗಳು, ಎನ್ ಜಿ ಓ ಗಳನ್ನು ಒಟ್ಟಾರೆ ಜೋಡಣೆ ಮಾಡುತ್ತಿದ್ದನ್ನು ಕಂಡು ಗ್ರಾಮದ ಗುರು ಹಿರಿಯರು, ಯುವಕರು ಇನ್ನು ಹೆಚ್ಚು ಕೆಲಸ ಮಾಡುವ ಪ್ರೋತ್ಸಾಹ ಕೊಟ್ಟು ಮಾರುತಿ ಮೆಡಿಕಲ್ ಕಂಪನಿ ಹಾಗೂ ಸೇವಾ ಜನನಿ ಫೌಂಡೇಶನ್ ಮಾಡುತ್ತಿರುವ ಕೆಲಸಗಳನ್ನು ಮೆಚ್ಚಿ ಅಪಾರ ಧನ್ಯವಾದಗಳು ನ್ನು ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ಜಗದೀಶ್ ಅಮಾತಿಗೌಡ್ರ ರಾಜ್ಯಾಧ್ಯಕ್ಷರು ಅಖಿಲ ಭಾರತ ತೈಲೀಕ ಸಾಹು(ಗಾಣಿಗ) ಮಹಾಸಭಾ ರಿ ದೆಹಲಿ ಯುವ ಘಟಕ ಕರ್ನಾಟಕ ಶರಣಬಸನಗೌಡ ಪಾಟೀಲ್ ಬಾಗಲಕೋಟೆ ಜಿಲ್ಲಾ ಅಧ್ಯಕ್ಷರು ಅಖಿಲ ಭಾರತ ತೈಲೀಕ ಸಾಹು ಮಹಾಸಭಾ(ಗಾಣಿಗ) ರಿ ದೆಹಲಿ ಯುವ ಘಟಕ ಹನಮಂತ ಭೀ ಗುಡೂರ ರಾಜ್ಯ ಗಾಣಿಗ ನೌಕರರು ಸಂಘದ ರಾಜ್ಯ ಸಂಘಟನೆ ಕಾರ್ಯದರ್ಶಿ ಹುಬ್ಬಳ್ಳಿ. ಬಸವರಾಜ ಸೋ ಗೋಣ್ಣಾಗರ ಮಾಜಿ ತಾಲೂಕ ಪಂಚಾಯತಿ ಸದಸ್ಯರು. ಶಿವಪ್ಪ ಹೊರಕೇರಿ ಎಸ್ ಎಮ್ ಡಿಸಿ ಅಧ್ಯಕ್ಷರು ಪ್ರೌಢಶಾಲಾ ವಿಭಾಗ ಶ್ರೀ ಹನಮಂತ ಹೊರಕೇರಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಎಸ್ ಎಮ್ ಡಿಸಿ ಅಧ್ಯಕ್ಷರು, ಪ್ರಾಥಮಿಕ ಶಾಲೆ. ಶಂಕ್ರಪ್ಪ ಮಾಗಿ ಮತ್ತು ಶಿಕ್ಷಕರಾದ ಸಿದ್ದು ಶಿರಸಂಗಿ ಹಾಗೂ ರಮೇಶ ಸರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು
ವರದಿ:- ರಾಜೇಶ್. ಎಸ್. ದೇಸಾಯಿ ಬಾದಾಮಿ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ