December 21, 2024

Bhavana Tv

Its Your Channel

ಬೇಲೂರಿನ ಶ್ರೀ ಅನ್ನದಾನೇಶ್ವರ ಮಠದಲ್ಲಿ ಡಾ! ಅಭಿನವ ಸಂಗನಬಸವ ಮಹಾಸ್ವಾಮಿ ಗಳಿಗೆ ಶ್ರದ್ಧಾಂಜಲಿ

ಬಾದಾಮಿ ತಾಲೂಕಿನ ಬೇಲೂರಿನ ಶ್ರೀ ಅನ್ನದಾನೇಶ್ವರ ಮಠದಲ್ಲಿ ಡಾ! ಅಭಿನವ ಸಂಗನಬಸವ ಮಹಾಸ್ವಾಮಿ ಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಹಂಪಿಯ ಹೇಮ ಕೂಟದ ಹಾಗೂ ಹಾಳಕೆರೆ ಮಠದ ಮತ್ತು ಶರಣರು ತಯಾರಾಗುವ ಸುಕ್ಷೇತ್ರ ಶಿವಯೋಗ ಮಂದಿರದ ಅಧ್ಯಕ್ಷರಾಗಿದ್ದ ನಡೆದಾಡುವ ದೇವರು ಎಂದೇ ಕರೆಯಿಸಿಕೊಂಡು ಧಾರ್ಮಿಕ ಸಾಮಾಜಿಕ ಕ್ಷೇತ್ರದಲ್ಲಿ ಸಾವಿರಾರು ಜನರ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹಾಸ್ವಾಮಿ, ಉತ್ತರ ಕರ್ನಾಟಕದ ಸಾವಿರಾರು ಸಂಖ್ಯೆಯಲ್ಲಿ ಭಕ್ತಸಮೂಹ ಹೊಂದಿದ್ದ ಮಹಾಶಿವಯೋಗಿ, ಸಾವಿರಾರು ಭಕ್ತರ ಬಾಳಲ್ಲಿ ಬೆಳಕು ತಂದ ಕಾಯಕಯೋಗಿ, ನಡೆದಾಡುವ ದೇವರು ಎಂದೇ ಭಕ್ತರು ಕರೆಯುತ್ತಿದ್ದ ಡಾ!! ಅಭಿನವ ಸಂಗನಬಸವ ಮಹಾಸ್ವಾಮಿಗಳು ಇತ್ತೀಚೆಗಷ್ಟೇ ಲಿಂಗೈಕ್ಯರಾದರು. ಇದನ್ನು ಕೇಳಿದ ಇಡೀ ಬೇಲೂರಿನ ಗ್ರಾಮಸ್ಥರಿಗೆ ದಿಗ್ಭ್ರಮೆ ಆಗಿಹೋಯಿತು.ಭಕ್ತಿ ದಾನ ಧರ್ಮಕ್ಕೆ ಹೆಸರುವಾಸಿ ಬಾದಾಮಿ ತಾಲೂಕಿನ ಬೇಲೂರ ಗ್ರಾಮ.ಮಹಾಸ್ವಾಮಿಗಳ ಅಸಂಖ್ಯಾ ಭಕ್ತ ಸಮೂಹ ಬೇಲೂರಿನಲ್ಲಿ ಇರುವುದು ಹೆಮ್ಮೆಯ ಸಂಗತಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರಿನ ಅನ್ನದಾನೇಶ್ವರ ಮಠದಲ್ಲಿ ಇಂದು ಡಾ!! ಅಭಿನವ ಸಂಗನಬಸವ ಮಹಾಸ್ವಾಮಿ ಗಳಿಗೆ ಇಂದು ಇಡೀ ಬೇಲೂರಿನ ಗ್ರಾಮಸ್ಥರೇ ಶ್ರದ್ಧಾಂಜಲಿ ಸಲ್ಲಿಸಿ ಭಕ್ತಿಭಾವದಿಂದ ನಮಿಸಿದರು.

ವರದಿ:- ರಾಜೇಶ್. ಎಸ್. ದೇಸಾಯಿ ಬಾದಾಮಿ

error: