December 21, 2024

Bhavana Tv

Its Your Channel

ಕಾನೂನಿನ ತತ್ವಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಿ: ಭೀಮಸೇನ ಚಿಮ್ಮನಕಟ್ಟಿ

ಬಾದಾಮಿ: ಸಂವಿಧಾನದ ತತ್ವಗಳನ್ನು ಅರ್ಥೈಸಿಕೊಂಡು ಎಲ್ಲರೂ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಗರದ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ನಗರದ ಶ್ರೀ ಕಾಳಿದಾಸ ಪದವಿ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯ ಮೇಲಿದ್ದ ಗಣ್ಯರು ಸಸಿಗೆ ನೀರು ಹಾಕುವುದರ ಮೂಲಕ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನ್ಯಾಯವಾದಿ ಮುತಾಲಿಕ ಸಂವಿಧಾನದ ಕುರಿತು ವಿಶೇಷ ಉಪನ್ಯಾಸ ನೀಡಿದರು. ವೇದಿಕೆಯ ಮೇಲೆ ಪ್ರಾಚಾರ್ಯ ಕೇಶವ ಕುಲಕರ್ಣಿ, ಐ.ಟಿ.ಐ.ಪ್ರಾಚಾರ್ಯ ಎಸ್.ಎಂ.ಮುಲ್ಲಾ, ಪ್ರೌಢಶಾಲೆಯ ಮುಖ್ಯಶಿಕ್ಷಕ ಡಿ.ಎಫ್.ಜುಟ್ಲರ್ ಹಾಜರಿದ್ದರು. ಎಂ.ಪಿ.ಮಾಧವನ ಸ್ವಾಗತಿಸಿದರು. ವೈ.ಆರ್.ಜಕ್ಕನ್ನವರ ನಿರೂಪಿಸಿದರು. ಎಸ್.ಬಿ.ಹಳ್ಳೂರ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಎಸ್.ಎಚ್.ಸಂಗಮದ, ಟಿ.ಎಚ್.ನಾಯಕ, ಎ.ಕೆ.ನದಾಫ, ವಿಷ್ಣು ರಾಠೋಡ, ಕೋರಿ, ಎಂ.ಕೆ.ಬೇಪಾರಿ, ಶಾಂತಾ ಪಾಟೀಲ, ಸುಜಾತಾ ಗೌಡರ, ಪ್ರಿಯಾಂಕ ಮಾದಗುಂಡಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವರದಿ:- ರಾಜೇಶ್. ಎಸ್.ದೇಸಾಯಿ ಬಾದಾಮಿ

error: