December 20, 2024

Bhavana Tv

Its Your Channel

ಶ್ರೀ ಕಬ್ಬಿಣ ಕೋಲೇಶ್ವರ ಮಠದ ಕಿರಿಯ ಶ್ರೀಗಳು ಇಮ್ಮಡಿ ಗುರುಮಲ್ಲಸ್ವಾಮಿಗಳು ಇಂದು ಶಿವೈಕ್ಯ ರಾಗಿದ್ದಾರೆ

ಗುಂಡ್ಲುಪೇಟೆ ; ತಾಲೂಕಿನ ಗೋಪಾಲಪುರ ಗ್ರಾಮದ ಶ್ರೀ ಕಬ್ಬಿಣ ಕೋಲೇಶ್ವರ ಮಠದ ಕಿರಿಯ ಶ್ರೀ ಗಳಾದ ಹಿಮ್ಮಡಿ ಗುರು ಮಲ್ಲ ಸ್ವಾಮಿಗಳು ಇಂದು ಮಧ್ಯಾಹ್ನ ೧೨ ಗಂಟೆ ಸಮಯದಲ್ಲಿ ಜಮೀನಿನಲ್ಲಿ ಕಾಯಕ ಮಾಡುತ್ತಿದ್ದ ಸಮಯದಲ್ಲಿ ನಾಗರ ಹಾವು ಕಡಿದು ಶಿವೈಕ್ಯರಾಗಿದ್ದಾರೆ. ಇವರಿಗೆ ೪೨ ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಕಬ್ಬಿಣ ಕೊಲೇಶ್ವರ ಮಠದ ಹಿರಿಯ ಶ್ರೀಗಳಾದ ಶ್ರೀ ಗಂಗಾಧರ ಸ್ವಾಮಿಗಳು ಹಾಗೂ ಗೋಪಾಲಪುರದ ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.
ನಾಳೆ ಗೋಪಾಲಪುರ ಗ್ರಾಮದಲ್ಲಿ ಕಬ್ಬಿಣ ಕೋಲೇಶ್ವರ ಮಠದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ವರದಿ ; ಸದಾನಂದ ಕನ್ನೆಗಾಲ ಗುಂಡ್ಲಪೇಟೆ

error: