December 22, 2024

Bhavana Tv

Its Your Channel

೨೭೦ ಕುಟುಂಬಕ್ಕೆ ದಿನಸಿ ಸಾಮಗ್ರಿ ವಿತರಣೆ,

ಭಟ್ಕಳ ; ಶ್ರೀ ನಿಚ್ಚಲಮಕ್ಕಿ ತಿರುಮಲ ವೆಂಕಟ್ರಮಣ ದೇವಸ್ತಾನ ಆಸರಕೇರಿ ಭಟ್ಕಳ ಇದರ ಹದಿನೆಂಟು ಕೂಟಗಲ್ಲಿ ಒಂದಾದ ಮುಟ್ಟಳ್ಳಿ ಕೂಟದ ೨೭೦ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಹಂಚಲಾಯಿತು ಇದಕ್ಕೆ ಒಟ್ಟು ಹಣ ಒಂದು ಲಕ್ಷ ಮುವತ್ತು ಸಾವಿರ ವೆಚ್ಚ ತಗಲಿದ್ದು. ರೂಪಾಯಿ ಹತ್ತು ಸಾವಿರ ಶ್ರೀ ನಿಚ್ಚಲಮಕ್ಕಿ ತಿರುಮಲ ವೇಂಕಟ್ರಮಣ ದೇವಸ್ಥಾನದಿಂದ ಸಹಾಯವಾಗಿ ಹಣ ನೀಡಲಾಯಿತು, ಉಳಿದ ಒಂದು ಲಕ್ಷ ಇಪ್ಪತ್ತು ಸಾವಿರ ರೂಪಾಯಿಯನ್ನು ಶ್ರೀಕಟ್ಟೇವಿರ ದೇವಸ್ಥಾನ ಮುಟ್ಟಳ್ಳಿ, ಕಟ್ಟೇವಿರ ಸೇವಾ ಸಮಿತಿ ಮುಟ್ಟಳ್ಳಿ, ಕಟ್ಟೇವಿರ ಯುವಶಕ್ತಿ ಸಂಘ ಮುಟ್ಟಳ್ಳಿ ಹಾಗೂ ಸತ್ಯಾಸಾಯಿ ಸಮಿತಿ ಮುಟ್ಟಳ್ಳಿ ಇವರು ಭರಿಸಿರುತ್ತಾರೆ. ಇದರ ಎಲ್ಲಾ ಸದಸ್ಯರು ಮತ್ತು ಯುವಶಕ್ತಿ ಸಂಘದ ಯುವಕರೆಲ್ಲರು ಸೇರಿ ಎಲ್ಲಾ ಮನೆ ಮನೆಗೆ ಹೋಗಿ ಅಚ್ಚುಕಟ್ಟಾಗಿ ನಿಬಾಯಿಸಿರುತ್ತಾರೆ.

error: