April 25, 2024

Bhavana Tv

Its Your Channel

ಪಶ್ಷಿಮ ವಲಯ ಐ.ಜಿ.ಪಿ. ದೇವ್‌ಜ್ಯೋತಿ ಅವರು ಭಟ್ಕಳಕ್ಕೆ ಭೇಟಿ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲೆ ಭಟ್ಕಳ ತಾಲೂಕಿನಲ್ಲಿ ಕರೋನಾ ಸೋಂಕಿತರು ಹೆಚ್ಚಾಗಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪಶ್ಷಿಮ ವಲಯ ಐ.ಜಿ.ಪಿ. ದೇವ್‌ಜ್ಯೋತಿ ಅವರು ಭಟ್ಕಳಕ್ಕೆ ಭೇಟಿ ನೀಡಿ ಲಾಕ್‌ಡೌನ್ ಆದ ನಂತರದಿAದ ಇಲ್ಲಿನ ತನಕ ಇಲಾಖೆಯಿಂದ ಕೈಗೊಂಡ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.

ಮಂಗಳೂರಿನಿAದ ನೇರವಾಗಿ ಭಟ್ಕಳಕ್ಕೆ ಆಗಮಿಸಿದ್ದ ಅವರು ಭಟ್ಕಳ ನಗರದಲ್ಲಿ ಒಂದು ಸುತ್ತು ಹಾಕಿದ್ದು . ಭಟ್ಕಳ ತಾಲೂಕಾಸ್ಪತ್ರೆ ಸೇರಿದಂತೆ ಅಂಜುಮನ್ ಹಾಸ್ಟೇಲನಲ್ಲಿ ಹೋಮ್ ಕ್ವಾರಂಟೈನಲ್ಲಿ ಇಟ್ಟಿರು ಸ್ಥಳಕ್ಕೆ ಹಾಗೂ ಎಲ್ಲಾ ಕಡೆಗಳಲಿಯೂ ತೆಗೆದುಕೊಂಡಿರುವ ಸುರಕ್ಷತಾ ಕ್ರಮವನ್ನು ಪರಿಶೀಲಿಸಿದರು. ನಂತರ ಇಲ್ಲಿನ ನಗರ ಠಾಣೆಯ ಆವರಣಕ್ಕೆ ಆಗಮಿಸಿದ್ದ ಅವರನ್ನು ಸುದ್ದಿ ಗಾರರು ಭೇಟಿಯಾದಾಗ ಸರಕಾರ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ಮುಂದಿನ ಎ.೧೪ರ ನಂತರವೂ ಕೂಡಾ ಸರಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದರ ಮೇಲೆ ತಮ್ಮ ಇಲಾಖೆ ಕಾರ್ಯಾಚರಣೆ ನಡೆಸಲಿದೆ. ಎ.೧೪ರ ನಂತರ ಬಂದೋಬಸ್ತ ಯಾವ ರೀತಿಯಾಗಿರಲಿದೆ ಎಂದು ಹೇಳಲು ಸಾಧ್ಯವಿಲ್ಲ, ಬೇರೆ ಬೇರೆ ಕಡೆಯಿದ್ದವರು ಅವರವರ ಸ್ಥಾನ ಸೇರಲು ಅವಕಾಶ ನೀಡುವ ಕುರಿತೂ ಹೇಳಲು ಸಾಧ್ಯವಿಲ್ಲ ಎಂದರು.

ಭಟ್ಕಳದಲ್ಲಿ ವಿಷೇಶವಾಗೇನೂ ಇಲ್ಲ, ಆದರೆ ಯಾವುದೇ ವ್ಯಕ್ತಿಯ ಪೂರ್ವಾಪರವನ್ನು ವಿಚಾರಿಸಿ ಸಂಶಯಿತರಾಗಿದ್ದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ. ಭಟ್ಕಳದಿಂದ ಮಾತ್ರವಲ್ಲ, ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡಾ ಗಡಿಯನ್ನು ಬಂದ್ ಮಾಡಲಾಗಿದ್ದು ಜನರ ಓಡಾಟವನ್ನು ನಿರ್ಬಂಧಿಸಲಾಗಿದೆ ಎಂದರು.
ಕಳೆದ ಎರಡು ತಿಂಗಳ ಹಿಂದೆ ಜನರಲ್ಲಿ ಕೋವಿಡ್-೧೯ ಕುತಿತು ಜಾಗೃತಿ ಇರಲಿಲ್ಲ, ಆದರೆ ಈಗ ಜನರಲ್ಲಿಯೂ ಕೂಡಾ ಜಾಗೃತಿ ಮೂಡಿದೆ. ಪ್ರತಿಯೋರ್ವರೂ ಕೂಡಾ ತಾವಾಗಿಯೇ ಬಂದು ಪರೀಕ್ಷೆಗೊಳಪಡುತ್ತಿದ್ದಾರೆ. ಯಾವುದೇ ರೀತಿಯ ಮಾಹಿತಿ ಬಂದರೂ ಕೂಡಾ ನಾವು ತಕ್ಷಣ ಕಾರ್ಯಪ್ರವೃತ್ತರಾಗುತ್ತೇವೆ. ಭಟ್ಕಳದಲ್ಲಿ ಪರೀಕ್ಷೆಗೆ ಕಳುಹಿಸಿದ ಮಾದರಿಗಳಲ್ಲಿ ಅನೇಕರದ್ದು ನೆಗೆಟಿವ್ ಬಂದಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು ಸರಕಾರದ ನಿಯಮದಂತೆ ನಾವು ಕಾರ್ಯಾಚರಣೆ ಮಾಡಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎಸ್.ಪಿ. ಶಿವಪ್ರಕಾಶ ದೇವರಾಜು, ಡಿ.ವೈ.ಎಸ್.ಪಿ. ಗೌತಮ್, ನಗರ ಠಾಣೆಯ ಸಬ್ ಇನ್ಸಪೆಕ್ಟರ್ ಎಚ್.ಬಿ. ಕುಡಗುಂಟಿ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

error: