December 22, 2024

Bhavana Tv

Its Your Channel

ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಯುವಶಕ್ತಿ ನವ ದೃಷ್ಟಿ ವಿನೂತನವಾದ ಕಾರ್ಯಕ್ರಮ ಆಯೋಜನೆ

ಚಾಮರಾಜನಗರ : ಡಿ.27 ಸೋಮವಾರ ಬೆಳಗ್ಗೆ 10.30ಕೆ ಡಾ. ಬಿಆರ್ ಅಂಬೇಡ್ಕರ್ ಭವನ ಚಾಮರಾಜನಗರದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಯುವಶಕ್ತಿನವ ದೃಷ್ಟಿ ಎಂಬ ವಿನೂತನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದರ ಪೂರ್ವಭಾವಿ ಸಭೆಯನ್ನು ಗುಂಡ್ಲುಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಕಾರ್ಯಕರ್ತರನ್ನೂ ಒಳಗೊಂಡoತೆ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಕಾಂಗ್ರೆಸ್ ಯುವ ಮುಖಂಡರಾದ ಹೆಚ್. ಎಂ ಗಣೇಶ್ ಪ್ರಸಾದ್ ಮಾತನಾಡಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಯುವಶಕ್ತಿ ನವ ದೃಷ್ಟಿ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು, ಶಾಸಕರು ,ಮಾಜಿ ಸಚಿವರು, ವಿಧಾನಪರಿಷತ್ ಸದಸ್ಯರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಮತ್ತು ಕಾಂಗ್ರೆಸ್ ನ ಎಲ್ಲಾ ವರಿಷ್ಠರು ಆಗಮಿಸಲಿದ್ದಾರೆ.ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಅಲ್ಲದೆ ಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಗಣೇಶ್ ಪ್ರಸಾದ್, ಚಾಮುಲ್ ಅಧ್ಯಕ್ಷರಾದ ನಂಜುOಡ ಪ್ರಸಾದ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ, ಪಿ.ಬಿ ರಾಜಶೇಖರ್ ,ಮುನಿರಾಜು, ಜಿ ಡಿಎಲ್.ಸುರೇಶ್, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಕೆ ಎಸ್ ಮಹೇಶ್, ಕಾಡ ಮಾಜಿ ಅಧ್ಯಕ್ಷರಾದ ಎಚ್ ಎಸ್ ನಂಜಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಗುರುಪ್ರಸಾದ್, ಕಾಂಗ್ರೆಸ್ ವಕ್ತಾರ ಬಿಜಿ ಶಿವಕುಮಾರ್, ನವೀನ ಮಾಡ್ರಹಳ್ಳಿ, ಮಣಿ, ಮಹೇಂದ್ರ ,ನೂರಾರು ಕಾರ್ಯಕರ್ತರು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: