December 19, 2024

Bhavana Tv

Its Your Channel

ಗುಂಡ್ಲುಪೇಟೆಯಲ್ಲಿ ಕುಡಿತ ಬಿಡಿಸುವ ಉಚಿತ ಶಿಬಿರ

ಗುಂಡ್ಲುಪೇಟೆ:- ಕಳೆದ ಎಂಟು ದಿನಗಳಿಂದ ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ನಡೆದ ಕುಡಿತ ಬಿಡಿಸುವ ಶಿಬಿರವನ್ನು ಶ್ರೀ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಶ್ರೀ ಕ್ಷೇತ್ರ ಜೆಎಸ್‌ಎಸ್ ಮಹಾವಿದ್ಯಾಪೀಠ ಮೈಸೂರು ಇವರ ಸಹಯೋಗ ಸಂಗಮ ಪ್ರತಿಷ್ಠಾನ ( ರಿ.)ಹಾಲಹಳ್ಳಿ ಮತ್ತು ಗುಂಡ್ಲುಪೇಟೆ ತಾಲೂಕಿನ ಸಂಘ ಸಂಸ್ಥೆಗಳು ಸೇರಿ ಕುಡಿತ ಬಿಡಿಸುವ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಶ್ರೀ ಜಗದ್ಗುರು ಶ್ರೀ ವೀರಸಿಂಹಾಸನ ಮಠ ಸುತ್ತೂರುಶ್ರೀ ರಾಜೇಂದ್ರಮಹಾ ಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ದುಶ್ಚಟದಿಂದ ದೂರ ಉಳಿದರೆ ಮನುಷ್ಯನಿಗೆ ಶಾಂತಿ ನೆಮ್ಮದಿ ಮತ್ತು ಆರ್ಥಿಕವಾಗಿ ಆತನು ಮುಂದೆ ಬರಲು ಸಾಧ್ಯ . ಚಟಕ್ಕೆ ಬಲಿಯಾದರೆ ಮನುಷ್ಯ ಸಮಾಜ ಆತನನ್ನು ನೋಡಿಕೊಳ್ಳುವಂತಹ ದೃಷ್ಟಿ ಬೇರೆಯಾಗುತ್ತದೆ ಹಾಗಾಗಿ ಸದೃಢ ಮನಸ್ಸನ್ನ ಇಟ್ಟುಕೊಂಡು ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬಾಳುವಂತಾಗಬೇಕು ಮತ್ತು ಈ ಶಿಬಿರದಿಂದ ತಮಗೆಲ್ಲ ಶುಭವಾಗಲಿ ಎಂದು ಹಿತನುಡಿಗಳನ್ನು ನುಡಿದರು.

ಈ ಸಂದರ್ಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು, ಚಿಕ್ಕತುಪ್ಪುರು ಶ್ರೀಗಳು, ಚುಂಚನಹಳ್ಳಿ ಶ್ರೀಗಳು, ಜಯ ರಾಜೇಂದ್ರ ಶ್ರೀಗಳು, ಶಾಸಕ ಸಿಎಸ್ ನಿರಂಜನ್ ಕುಮಾರ್, ಯುವ ಮುಖಂಡ ಎಚ್. ಎಂ ಗಣೇಶ್ ಪ್ರಸಾದ್, ಕಬ್ಬಳ್ಳಿ ಮಹೇಶ್, ಅಖಿಲ ಭಾರತ ವೀರಶೈವ ತಾಲೂಕು ಅಧ್ಯಕ್ಷರಾದ ಎಚ್ ಎಸ್ ನಂಜಪ್ಪ , ಉಪಾಧ್ಯಕ್ಷರಾದ ಎಚ್ ಎಂ ಮಹದೇವಪ್ಪ ,ಜಿಲ್ಲಾಧ್ಯಕ್ಷರಾದ, ಮೂಡಲು ಪುರ ನಂದೀಶ್, ಗಂಗಪ್ಪ ,ರಾಜಶೇಖರ್ , ಸಂಗಮ ಪ್ರತಿಷ್ಠಾನ ಕಾರ್ಯದರ್ಶಿ ಮಂಜು, ಮಲ್ಲು, ಹಾಗೂ ಡಾಕ್ಟರ್ ಎಂ.ಪಿ ಸೋಮಶೇಖರ್ ಕುಡಿತ ಬಿಡಿಸುವ ಶಿಬಿರ ಜೆಎಸ್‌ಎಸ್ ಸಂಸ್ಥೆ ಸಿಬ್ಬಂದಿಗಳು ಹಾಜರಿದ್ದರು.

ವರದಿ: ಸದಾನಂದ ಕನ್ನೆಗಾಲ ಗುಂಡ್ಲುಪೇಟೆ

error: