December 22, 2024

Bhavana Tv

Its Your Channel

ಪಂಜಾಬ್ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತನವನ್ನು ಖಂಡಿಸಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ

ಗುಂಡ್ಲುಪೇಟೆ:- ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ಪಂಜಾಬ್ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ್ಯ ತನವನ್ನು ಖಂಡಿಸಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿದರು

ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಪಂಜಾಬ್ ಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದಿಂದಾದ ಭದ್ರತಾ ವೈಫಲ್ಯವನ್ನು ಖಂಡಿಸಿ ಹಾಗೂ ಕಾಂಗ್ರೆಸ್ ಪಕ್ಷದ ರಾಜಕೀಯ ಷಡ್ಯಂತ್ರ ವಿರೋಧಿಸಿ ಇಂದು ಗುಂಡ್ಲುಪೇಟೆ ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಎಂಡಿಸಿಸಿ ಬ್ಯಾಂಕ್ ಮುಂಭಾಗ ಜಮಾಯಿಸಿದ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಚಿಹ್ನೆಯ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ಹೊರಹಾಕಿದರು.

ಇದೇ ಸಂದರ್ಭದಲ್ಲಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಣಯ್ ನಮ್ಮ ದೇಶಕ್ಕೆ ಅಂಟಿದ ಮಾಹಾಮಾರಿ ಈ ದರಿದ್ರ ಕಾಂಗ್ರೆಸ್ ಅಧಿಕಾರಕ್ಕಾಗಿ ಎಂತಹ ಹೀನ ಕೆಲಸ ಮಾಡಲು ಹಿಂಜರಿಯುವದಿಲ್ಲ ಎಂದು ಮತ್ತೆ ಜಗಜ್ಜಾಹಿರಾಯಿತು.

ರಾಷ್ಟ್ರದ ಪ್ರಧಾನಿಯೊಬ್ಬರು ರಾಜ್ಯಕ್ಕೆ ಆಗಮಿಸಿದಾಗ ರಾಜ್ಯದ ಮುಖ್ಯಮಂತ್ರಿ ಹೋಗಿ ಸ್ವಾಗತಿಸುವುದು ಶಿಷ್ಟಾಚಾರ. ಆದರೆ ಪಂಜಾಬ್ ಮುಖ್ಯಮಂತ್ರಿ ಪ್ರಧಾನಿಯವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಯಾಕೆ ಹೋಗಲಿಲ್ಲ? ಪಂಜಾಬ್ ಮುಖ್ಯಮಂತ್ರಿ ಮತ್ತು ಡಿಜಿಪಿ ಮೋದಿಯವರ ಭದ್ರತಾ ಸಿಬ್ಬಂದಿಗಳ ಫೋನ್ ಕರೆಗಳನ್ನೇ ಯಾಕೆ ಸ್ವೀಕರಿಸಲಿಲ್ಲ? ಅತಿ ಉದ್ದದ ಫ್ಲೈ ಓವರ್ ಮೇಲೆ 20 ನಿಮಿಷಗಳ ಕಾಲ ಪ್ರಧಾನಿಗಳನ್ನು ಇಡೀ ಭದ್ರತಾ ತಂಡದ ಸಮೇತ ತಡೆಯಲಾಗಿತ್ತು ಇದರ ಹಿಂದಿನ ಉದ್ದೇಶವಾದರೂ ಏನು? ಪ್ರಧಾನಿ ಯವರು ಭಧ್ರತಾ ತಂಡದ ಸಮೇತ ಫ್ಲೈ ಓವರ್ ಮೇಲೆ ತಿರುವುಗಳನ್ನು ತೆಗೆದುಕೊಳ್ಳಲೂ ಸಾಧ್ಯವಾಗದಂತಹ ಸ್ಥಿತಿಯಲ್ಲಿ 20 ನಿಮಿಷಗಳ ಕಾಲ ಅಕ್ಷರಶಃ ಬಂಧನದ ಸ್ಥಿತಿಯಲ್ಲಿ ಇರುವಂತೆ ಮಾಡಿದ್ದು ಯಾರು? ಈ ಘಟನೆ ನಡೆದಿದ್ದ ಸ್ಥಳಕ್ಕು ಪಾಕಿಸ್ತಾನ ಗಡಿಗು ಕೇವಲ 10 ಕಿ ಮೀ ದೂರವಷ್ಟೇ, (ಯಾವುದೇ ಮಿಸೈಲ್ ನ ದಾಳಿಗೆ ಒಳಗಾಗ ಬಹುದಾದ ಸ್ಥಿತಿ).
ಸದರಿ ಫ್ಲೈ ಓವರ್ ನ ಕೆಳಗೆ 20ಕ್ಕೂ ಹೆಚ್ಚು ಟ್ರಾಕ್ಟರ್ ಮತ್ತು ಹತ್ತಾರು ಲಾರಿಗಳನ್ನು ನಿಲ್ಲಿಸಲಾಗಿತ್ತು ಈ ತರಹದ ನಿರ್ಲಕ್ಷ್ಯ ಯಾಕಾಯಿತು ? ಪಂಜಾಬ್ ಡಿಜಿಪಿ ಪ್ರಧಾನಿಯವರ ತಂಡದ ಸಂಚಾರಕ್ಕೆ ಅನುಮತಿ ಕೊಟ್ಟನಂತರ ನಿನ್ನೆ ಭಧ್ರತೆಯ ರಿಹರ್ಸಲ್ ನಡೆಸಿದ ನಂತರವೂ ತಾನು ಸ್ಥಳದಲ್ಲಿ ಇರದಿದ್ದದ್ದು ಮತ್ತು ಫೋನ್ ಕಾಲ್ ಗಳನ್ನೂ ಸ್ವೀಕರಿಸದಿದ್ದದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆಯ ಕೆಲವೇ ನಿಮಿಷದ ಒಳಗೆ ಕಾಂಗ್ರೆಸ್ ನಾಯಕರು ಘಟನೆಯನ್ನು ಸಂಭ್ರಮಿಸಿ ಟ್ವೀಟ್ ಮಾಡುತ್ತಿದ್ದರ ಹಿಂದಿನ ಉದ್ದೇಶವಾದರೂ ಏನು?
ದೇಶಕ್ಕಾಗಿ ದುಡಿಯುವ ಮನಸ್ಸಿಲ್ಲದೆ ಕೇವಲ ಕುಟುಂಬ ರಾಜಕಾರಣ ನಡೆಸಿದ ನಿಮ್ಮನ್ನು 2014 ರಲ್ಲೇ ಜನತೆ ತಿರಸ್ಕರಿಸಿದ್ದಾರೆ! ಅದರ ಅಸೂಯೆಯನ್ನು ಈಗ ಪ್ರಧಾನಿಯವರನ್ನು ಅಡ್ಡಗಟ್ಟುವ ಮೂಲಕ ತೀರಿಸಿಕೊಳ್ಳಲು ಯತ್ನಿಸುತ್ತಿರುವ ನಿಮ್ಮ ಪರಿಸ್ಥಿತಿ ನಗು ತರಿಸುತ್ತಿದೆ! ಇಷ್ಟೊಂದು ಹೀನಾ ರಾಜಕಾರಣ ಬೇಕಾ, ಕಾಂಗ್ರೆಸಿಗರೆ? ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್ನ ನ ನೀಚ ರಾಜಕಾರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾಯಿತು.

ಇಂದಿನ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್,ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷ ಸುನೀಲ್ ಮೂಡ್ಲು,ತಾಲ್ಲೂಕು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ,ಎಸ್ ಟಿ ಮಹದೇವಸ್ವಾಮಿ, ಚನ್ನಂಜಯ್ಯನಹುAಡಿ ಮಹದೇವಪ್ರಸಾದ್, ಮಾಡ್ರಹಳ್ಳಿ ನಾಗೇಂದ್ರ, ಮಾಡ್ರಳ್ಳಿ ಮಲ್ಲೇಶ್, ಮಳವಳ್ಳಿ ಮಹೇಶ್ ,ಚನ್ನಮಲ್ಲೀಪುರ ಬಸವಣ್ಣ, ನಂದೀಶ್ ಹಂಗಳ, ಮೂಡ್ನಾಕೂಡು ಪ್ರಕಾಶ್, ಪುರಸಭಾ ಸದಸ್ಯರಾದ ಕಿರಣ್ ಗೌಡ,ನಾಗೇಶ್,ಅಗತಗೌಡನಹಳ್ಳಿ ಬಸವರಾಜು,ನವೀದ್ ಖಾನ್ ,ಹನೀಫ್,ತಿರುಪತಿ, ಶಿವಪುರ ಮಂಜು,ಶಾAತಪ್ಪ ,ಕಂದೇಗಾಲ ಆನಂದ್ ,ಗರಗನಹಳ್ಳಿ ಮಹೇಂದ್ರ,ದಿನೇಶ್, ನಾಗಣ್ಣ ಕನ್ವಿ,ಪಾನು ಮಡಹಳ್ಳಿ, ರಾಜೇಶ್ ಮಡಹಳ್ಳಿ,ವಿಜಯ್ ಬೊಮ್ಮನಹಳ್ಳಿ ,ಸುನೀಲ್ ತೆರಕಣಾಂಬಿ,ಬೆಳವಾಡಿ ಮಂಜು,ಮಡಳ್ಳಿ ಜಗಪ್ಪ, ಶಿಂಡನಪುರ ಜಗದೀಶ್, ಬೆಟ್ಟಳ್ಳಿ ಮಲ್ಲು, ಹೊರೆಯಾಲ ಮಹದೇವಸ್ವಾಮಿ,ವೀರನಪುರ ಪ್ರಸನ್ನ, ಬಸವಣ್ಣ, ಪ್ರವೀಣ್, ರವಿ, ನಾಗೇಂದ್ರ, ಹಾಗೂ ಇನ್ನೂ ಅನೇಕ ಯುವ ಮೋರ್ಚ ಕಾರ್ಯಕರ್ತರು ಉಪಸ್ಥಿತರಿದ್ದರು….

ವರದಿ: ಸದಾನಂದ ಕನ್ನೇಗಾಲ

error: