December 22, 2024

Bhavana Tv

Its Your Channel

ವಿಕಲಚೇತನರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ

ಗುಂಡ್ಲುಪೇಟೆ .ತಾಲೂಕಿನ ಭೀಮನಬೀಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಬಿ.ಜಿ ಶಿವಕುಮಾರ್ ರವರ ನೇತೃತ್ವದಲ್ಲಿ ಸಭೆ ನಡೆಸಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಆಚರಣೆ ಮಾಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮಾತನಾಡಿದ ಅಧ್ಯಕ್ಷರು15ನೇ ಹಣಕಾಸಿನ ಅನುದಾನದಲ್ಲಿ ಗ್ರಾಮ ಪಂಚಾಯಿತಿಯ ಕಂದಾಯ ವಸೂಲಿ ಆಗುವುದರಲ್ಲೀ ಶೇಕಡಾ ಐದರಷ್ಟು ವಿಕಲಚೇತನರಿಗೆ ಮೀಸಲಿಟ್ಟಿದ್ದೇವೆ. ಆದರೆ ಅವರಿಗೆ ವೈಯಕ್ತಿಕ ವಾಗಿ ಹಣವನ್ನು ಕೊಡಲು ಬರುವುದಿಲ್ಲ.ಹಾಗಾಗಿ ವಿಕಲಚೇತನರಿಗೆ ಶೌಚಾಲಯ ನಿರ್ಮಾಣ, ಮನೆಯ ಪಕ್ಕದಲ್ಲಿ ಚರಂಡಿ ಇದ್ದರೆ ನಿರ್ಮಾಣ, ,ಆರೋಗ್ಯಕ್ಕೆ ಬೇಕಾಗುವ ಮಾತ್ರೆಗಳು ,ಹಾಗೂ ನಡೆಯಲು ಕೋಲು ನೀಡುವುದು, ಮತ್ತು ತಾಲೂಕು ಪಂಚಾಯತಿಯಲ್ಲಿ ಕುರಿಗಳ ಸಾಕಾಣಿಕೆ ,ಹಸು ಸಾಕಾಣಿಕೆ, ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ತ್ರಿಚಕ್ರ ವಾಹನ ಸೌಲಭ್ಯ ಇನ್ನು ಅನೇಕ ರೀತಿಯಲ್ಲಿ ವಿಕಲಚೇತನರು ಸೌಲಭ್ಯವನ್ನು ಪಡೆಯಬಹುದು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿಜಿ ಶಿವಕುಮಾರ್, ಸದಸ್ಯರುಗಳು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಮಂಜುಳಾ ವಿಕಲ ಚೇತನರು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಹಾಜರಿದ್ದರು.

ವರದಿ: ಸದಾನ0ದ ಕನ್ನೆಗಾಲ ಗುಂಡ್ಲುಪೇಟೆ

error: