December 21, 2024

Bhavana Tv

Its Your Channel

ಚೊಳಚಗುಡ್ಡದ ಶಾಕಂಬರೀ ವಿದ್ಯಾನಿಕೇತನ ಶಾಲೆಯಲ್ಲಿ 800 ವಿದ್ಯಾರ್ಥಿಗಳಿಂದ ಸೂರ್ಯನಮಸ್ಕಾರ

ಬಾದಾಮಿ:--ಆಜಾದಿಕಾ ಅಮೃತ ಮಹೋತ್ಸವ ಹಾಗೂ ಮಕರ ಸಂಕ್ರಾಂತಿಯ ಅಂಗವಾಗಿ ಇಂದು ಚೊಳಚಗುಡ್ಡದ ಶಾಕಂಭರೀ ವಿದ್ಯಾನಿಕೇತನ ಶಾಲೆಯಲ್ಲಿ 800 ವಿಧ್ಯಾರ್ಥಿಗಳಿಗೆ ಸೂರ್ಯನಮಸ್ಕಾರ ಮಾಡಿಸಲಾಯಿತು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಶ್ರೀ ಶಾಖಕಂಬರಿ ವಿದ್ಯಾನಿಕೇತನ ಶಾಲೆಯಲ್ಲಿ ಆಜಾದಿಕಾ ಅಮೃತ ಮಹೋತ್ಸವದ ಹಾಗೂ ಮಕರ ಸಂಕ್ರಾಂತಿಯ ಅಂಗವಾಗಿ ಇಂದು ಶ್ರೀ ಶಾಕಂಭರೀ ವಿದ್ಯಾನಿಕೇತನ ಚೊಳಚಗುಡ್ಡ ಇದರ ಸಹಯೋಗದಲ್ಲಿ ಏಕಕಾಲಕ್ಕೆ 800 ಮಕ್ಕಳಿಗೆ ಸೂರ್ಯ ನಮಸ್ಕಾರವನ್ನು ಮಾಡಿಸಲಾಯಿತು. ಶಾಲೆಯ ಮೈದಾನದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಒಂದೊಂದು ತಂಡದ ಮಕ್ಕಳಿಗೆ ಇಂದು ತರಹದ ಬಣ್ಣದ ಸಮವಸ್ತ್ರವನ್ನು ಧರಿಸಿ ನೆಲಕ್ಕೆ ಬಟ್ಟೆ ಹಾಕಿ ಪ್ರತಿಯೊಬ್ಬರೂ ಸೂರ್ಯನಮಸ್ಕಾರ ದ ವಿಶೇಷ ಅನುಭವವನ್ನು ಪಡೆದರು. ಶಾಲೆಯ ಚಿಣ್ಣರು ಪಾಲ್ಗೊಂಡು ಸೂರ್ಯನಮಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಎಲ್ಲರ ಕಣ್ಮನ ಸೆಳೆಯುವಂತಿತ್ತು.ಚಿಣ್ಣರ ಆ ಆಯಾಮಗಳು ಆ ಸೂರ್ಯದೇವನ ನ್ನೇ ನಾಚಿಸು ವಂತಿತ್ತು. ಹಾಗೆಯೇ ಸಂಸ್ಥೆಯ ಎಲ್ಲಾ ಶಿಕ್ಷಕ ವರ್ಗವೂ ಭಾಗವಹಿಸಿ ಹಿಂದೂ ಸಂಸ್ಕೃತಿಯ ಹೊಸಪ್ರಕಾರ ಹೊಸ ವರ್ಷಕ್ಕೆ ಸೂರ್ಯದೇವನಿಗೆ ವಂದಿಸಿ
ಸಂಕ್ರಮಣಕ್ಕೆ ಸ್ವಾಗತಿಸಿದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: