December 22, 2024

Bhavana Tv

Its Your Channel

ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತ ಗುಂಡ್ಲುಪೇಟೆ ತಾಲೂಕು ಹೆಸರಿನಲ್ಲಿ ಪ್ರಾರಂಭ ಮಾಡಲು ತೀರ್ಮಾನ.

ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಕುರುಬ ಸಮಾಜದ ಮುಖಂಡರಾದ ಎ ಲ್. ಸುರೇಶ್ ರವರ ನೇತೃತ್ವದಲ್ಲಿ ಸಭೆ ನಡೆಸಿ ಸಭೆಯಲ್ಲಿ ತಾಲೂಕಿನ ಕುರುಬಸಮಾಜದ ಬಂಧುಗಳ ಅಭಿವೃದ್ಧಿಗಾಗಿ ತಾಲೂಕಿನಲ್ಲಿ ಶ್ರೀ ಕನಕ ಪತ್ತಿನ ಸಹಕಾರ ಸಂಘ ನಿಯಮಿತ ಗುಂಡ್ಲುಪೇಟೆ ತಾಲೂಕು ಪ್ರಾರಂಭ ಮಾಡಲು ತೀರ್ಮಾನಿಸಿ ಹಾಗೂ ಸಮಾಜದ ಬಂಧುಗಳು ಗ್ರಾಮಗಳಿಗೆ ಭೇಟಿ ಕೊಟ್ಟು ಸಂಘದ ಮಹತ್ವ ಹಾಗೂ ಸಂಘದ ಸದಸ್ಯತ್ವ ಪಡೆಯುವಂತೆ ಕೋರಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಎಚ್ ಎನ್ ಬಸವರಾಜು, ಉಪಾಧ್ಯಕ್ಷರಾದ ನಾಗರಾಜು, ಮತ್ತು ಬೀರೇಗೌಡರು ಪ್ರಧಾನಕಾರ್ಯದರ್ಶಿ ಶಿವರಾಜು ,ನಿರ್ದೇಶಕರುಗಳಾದ ವೆಂಕಟೇಶ ,ಬಸವಣ್ಣ ,ಮಹೇಶ ಸುರೇಶ,ವಿಶ್ವನಾಥ ಕುಮಾರಸ್ವಾಮಿ , ನಾಗರಾಜು ಮಹದೇವ ,ಮಹದೇವ ಗೌಡ, ಹಾಗೂ ಸಮಾಜದ ಮುಖಂಡರುಗಳು ಹಾಜರಿದ್ದರು

ವರದಿ:ಸದಾನಂದ ಕಣ್ಣೆಗಾಲ ಗುಂಡ್ಲುಪೇಟೆ

error: