December 21, 2024

Bhavana Tv

Its Your Channel

ಕನ್ನೆಗಾಲ ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ಆಶ್ರಯ ಮನೆಗಳ ಹಂಚಿಕೆ ವಿಚಾರವಾಗಿ ಮಾತಿನ ಚಕಮಕಿ

ಗುಂಡ್ಲುಪೇಟೆ. ತಾಲೂಕಿನ ಕಣ್ಣೇಗಾಲ ಗ್ರಾಮ ಪಂಚಾಯತಿಯ ಆವರಣದಲ್ಲಿ ನಡೆದ ಗ್ರಾಮಸಭೆಯಲ್ಲಿ ದೇವರಹಳ್ಳಿ ಗ್ರಾಮದ ಯುವ ಮುಖಂಡರಾದ ಮಹೇಶ್ ಮಾತನಾಡಿ ಸರ್ಕಾರ ಬಡವರಿಗೆ ಮತ್ತು ನಿರ್ಗತಿಕರಿಗೆ ಅರ್ಹ ಫಲಾನುಭವಗಳಿಗೆ ನೀಡಿರುವ ಆಶ್ರಯ ಮನೆಗಳನ್ನು ವಾರ್ಡ್ ಸದಸ್ಯರು ರಾಜಕೀಯ ತಾರತಮ್ಯ ಮಾಡಿ ತಮಗೆ ಇಷ್ಟ ಬಂದ ಫಲಾನುಭವಿಗಳಿಗೆ ಮನೆ ಹಾಕುತ್ತಿದ್ದಾರೆ. ಹಾಗಾದರೆ ವಾರ್ಡ್ ಸಭೆ ಹಾಗೂ ಗ್ರಾಮಸಭೆಗಳನ್ನು ಏಕೆ ಮಾಡಬೇಕು ಎಂದು ಪ್ರಶ್ನಿಸಿದರು. ಗ್ರಾಮಸಭೆಯಲ್ಲಿ ಸೂಕ್ತವಾದ ಫಲಾನುಭವಿಗಳನ್ನು ಆಯ್ಕೆ ಮಾಡಿದೆ ಸಾಮಾನ್ಯ ಸಭೆಯಲ್ಲಿಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ ಹಾಗಾದರೆ ಗ್ರಾಮ ಸಭೆಯನ್ನು ಏಕೆ ಮಾಡಬೇಕು ಎಂಬುದು ನಮ್ಮ ಪ್ರಶ್ನೆಯಾಗಿದೆ ಎಂದರು. ಏನೇ ಆಗಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ತಲುಪಬೇಕಾಗಿದ್ದ ಆಶ್ರಯ ಮನೆಗಳನ್ನು ಜನಪ್ರತಿನಿಧಿಗಳು ಮತ್ತು ರಾಜಕೀಯ ಮುಖಂಡರುಗಳು ಸೇರಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದೆ ಕೈಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ:ಸದಾನ0ದ ಕನ್ನೆಗಾಲ ಗುಂಡ್ಲುಪೇಟೆ

error: