December 22, 2024

Bhavana Tv

Its Your Channel

ಕನ್ನಡ ನಾಮಫಲಕವನ್ನು ಹಾಕುವಂತೆ ಕಾವಲುಪಡೆ ಸಂಘಟನೆ ಒತ್ತಾಯ

ಗುಂಡ್ಲುಪೇಟೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಊಟಿ ಮೈಸೂರು ರಸ್ತೆಯಲ್ಲಿರುವ ದ್ವಿಚಕ್ರ ವಾಹನಗಳ ಹಲವಾರು ಶೋರೂಂ ಗಳ ನಾಮಫಲಕವೂ ಆಂಗ್ಲ ಭಾಷೆಯಲ್ಲಿದ್ದು ಇದನ್ನು ಕೂಡಲೇ ತೆರವುಗೊಳಿಸಿ ಕನ್ನಡ ಭಾಷೆಯಲ್ಲಿ ಹಾಕುವಂತೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕಾವಲುಪಡೆಯ ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಮಾತನಾಡಿ ಕೂಡಲೇ ಆಂಗ್ಲ ಭಾಷೆಯಲ್ಲಿರುವ ನಾಮಫಲಕವನ್ನು ತೆರವುಗೊಳಿಸಿ ಕನ್ನಡ ನಾಮ ಫಲಕವನ್ನು ಅಳವಡಿಸಬೇಕು. ಇಲ್ಲದಿದ್ದರೆ ಆಂಗ್ಲಭಾಷೆಯ ನಾಮ ಫಲಕಕ್ಕೆ ಮಸಿಬಳಿಯುವುದಾಗಿ ಎಚ್ಚರಿಕೆ ನೀಡಿದ್ದರು.

ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡ್ರು, ಸಲಹೆಗಾರರಾದ ಮುಬಾರಕ್, ತಾಲೂಕು ಕಾರ್ಯ ಅಧ್ಯಕ್ಷರಾದ ಇಲಿಯಾಸ್, ಟೌನ್ ಉಪಾಧ್ಯಕ್ಷರಾದ ಸಾಧಿಕ್ ಪಾಶ, ಕಸಬಾ ಹೋಬಳಿಯ ಅಧ್ಯಕ್ಷರಾದ ಹೆಚ್ ರಾಜು, ಮಿಮಿಕ್ರಿ ರಾಜು ಉಪಸ್ಥಿತರಿದ್ದರು

ವರದಿ: ಸದಾನಂದ ಕನ್ನೇಗಾಲ

error: