December 22, 2024

Bhavana Tv

Its Your Channel

ಅನಾರೋಗ್ಯ ವಿಕಲಚೇತನನಿಗೆ ಕರುನಾಡು ಯುವಶಕ್ತಿ ಸಂಘಟನೆ ನೆರವು

ಗುಂಡ್ಲುಪೇಟೆ: ತಾಲ್ಲೂಕಿನ ಬೆರಟಹಳ್ಳಿ ಗ್ರಾಮದ ರಾಜಮ್ಮ ನೇನೆಕಟ್ಟೆಗೆ ಮದುವೆಯಾಗಿದ್ದು ಮಗ ಮಹದೇವಪ್ರಸಾದ್ ಮತ್ತು ರಾಜಮ್ಮ ಇಬ್ಬರೆ ವಾಸ ಮಾಡುತಿದ್ದರು ರಾಜಮ್ಮ ಕೂಲಿ ಮಾಡಿಕೊಂಡು ಜೀವನ ಸಾಗಿಸುತಿದ್ದರು ಮಗ ಮಹದೇವಪ್ರಸಾದ್ ಗೆ ಹುಟ್ಟಿದಾಗಿಂದ ಒಂದು ಕಣ್ಣು ಇಲ್ಲ ಕೆಲಸ ಮಾಡುವಷ್ಟು ದೈಹಿಕ ಸಾಮರ್ಥ್ಯ ಇಲ್ಲ ಈಗ ಬೆನ್ನು ನರ ಸಮಸ್ಯೆಯಿಂದ ಹಾಸಿಗೆ ಹಿಡಿದಿದ್ದು ಚಿಕಿತ್ಸೆ ಕೊಡಿಸಲಾಗದ ಸ್ಥಿತಿಯಲ್ಲಿದ್ದಾರೆ.

ಇತ್ತ ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಚಿಕಿತ್ಸೆಗೆ ಹಾಗೂ ಜೀವನ ನಿರ್ವಹಣೆಗೆ ಸಮಸ್ಯೆಯಾಗಿರುವ ವಿಚಾರ ತಿಳಿದು ಕರುನಾಡು ಯುವಶಕ್ತಿ ಸಂಘಟನೆಯ ಅಧ್ಯಕ್ಷ ಮುನೀರ್ ಪಾಷಾ ಸಂಕಷ್ಟದಲ್ಲಿರುವ ತಾಯಿ ಮಗನ ನೆರವಿಗೆ ನಿಂತು ಆಹಾರ ಕಿಟ್ ನಿಡುವ ಮೂಲಕ ಮಾನವೀಯತೆ ಮೆರೆದರು.

ಸಾಹಿತಿಗಳಾದ ಕಾಳಿಂಗ ಸ್ವಾಮಿ ಮಾತನಾಡಿ ಇಂತಹ ಸಂಕಷ್ಟದಲ್ಲಿರುವವರಿಗೆ ಅರ್ಥಿಕವಾಗಿ ಸಧೃಡವಾಗಿರುವವರು ಕೈಲಾದ ಸಹಾಯ ಮಾಡಿದರೆ ನೊಂದವರು ಅನಾರೊಗ್ಯದಲ್ಲಿರುವವರಿಗೆ ಚಿಕಿತ್ಸೆಗೆ ಸಹಾಯವಾಗುತ್ತದೆ ಇತ್ತ ಜೀವನ ನಿರ್ವಹಣೆ ಮಾಡುವುದೋ ಇಲ್ಲ ಆಸ್ಪತ್ರೆ ಔಷದಿಗಾಗಿ ಹಣ ಹೊಂದಿಸಲು ಆಗದ ಅದೆಷ್ಟೊ ಕುಟುಂಬಕ್ಕೆ ದಾನಿಗಳು ನೆರವಾಗಬೇಕು ಎಂದರು.

ಈ ಸಂದರ್ಭದಲ್ಲಿ ಕರುನಾಡು ಯುವಶಕ್ತಿ ತಾಲ್ಲೂಕು ಅಧ್ಯಕ್ಷ ಮುನೀರ್ ಪಾಷಾ, ಕಾರ್ಮಿಕ ಘಟಕ ಅಧ್ಯಕ್ಷ ಅಡ್ಡು, ಪ್ರಗತಿಪರ ಚಿಂತಕ ಕಾಳಿಂಗಸ್ವಾಮಿ, ಮಾಡ್ರಹಳ್ಳಿ ನವೀನ್ ಇದ್ದರು.

ವರದಿ: ಸದಾನಂದ ಕನ್ನೇಗಾಲ

error: