December 21, 2024

Bhavana Tv

Its Your Channel

ತ್ರಿವಿಧ ದಾಸೋಹ ಪರಮ ಪೂಜ್ಯ ಡಾಕ್ಟರ್ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ

ಗುಂಡ್ಲುಪೇಟೆ ತಾಲೂಕಿನ ಹೊಂಗಳ್ಳಿ ಗ್ರಾಮದಲ್ಲಿ ನಡೆದ ನಡೆದಾಡುವ ದೇವರು ಪರಮಪೂಜ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ದಿನದಂದು ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಗ್ರಾಮಸ್ಥರು ಹಾಗೂ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಸಂಘಟನೆ ಯವರು ಮತ್ತು ಸದಸ್ಯರುಗಳು ಅದ್ದೂರಿಯಾಗಿ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆಯ ಅಧ್ಯಕ್ಷರಾದ ರಂಗಪ್ಪ ನಾಯಕ ಮಾತನಾಡಿ ಮಾನವ ಕುಲಕ್ಕೆ ನಡೆದಾಡುವ ದೇವರು ಡಾಕ್ಟರ್ ಶಿವಕುಮಾರ ಸ್ವಾಮೀಜಿ ಅವರನ್ನು ಇಂದು ಸ್ಮರಣೆ ಮಾಡುತ್ತಾ ಅವರ ಆದರ್ಶಗಳನ್ನು ನಾವು-ನೀವೆಲ್ಲರೂ ಪಾಲಿಸೋಣ ಎಂದರು.

ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಕಸ್ತೂರಿ ಕರ್ನಾಟಕ ನ್ಯಾಯ ಪರ ವೇದಿಕೆ ಸಂಘಟನೆಯ ಅಧ್ಯಕ್ಷರುಎಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ :- ಸದಾನಂದ ಕನ್ನೇಗಾಲ

error: