ಗುಂಡ್ಲುಪೇಟೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ಪ್ರಸಾದ್ ರವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ದಿವಂಗತ ಮಹದೇವ ಪ್ರಸಾದ್ ಮತ್ತು ಗೀತಾ ಮಹದೇವ ಪ್ರಸಾದ್ ರವರು ಕಳೆದ ಇಪ್ಪತ್ತೈದು ವರ್ಷ ಗುಂಡ್ಲುಪೇಟೆಗೆ ಏನು ಅಭಿವೃದ್ಧಿ ಮಾಡಿಲ್ಲ ಎಂಬ ಮಾತಿಗೆ ವಿರುದ್ಧವಾಗಿ ಎಚ್ ಎಂ ಗಣೇಶ್ ಪ್ರಸಾದ್ ಅವರು ತಿರುಗೇಟು ನೀಡಿದ್ದಾರೆ.
ಕಳೆದ 25 ವರ್ಷಗಳಿಂದ ಗುಂಡ್ಲುಪೇಟೆ ಗೆ ಅಭಿವೃದ್ಧಿ ಪರ್ವವೇ ಹರಿದುಬಂದಿದೆ. ಮೊದಲನೆಯದಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಮಿನಿ ವಿಧಾನಸೌಧ , ಬಸ್ ನಿಲ್ದಾಣ,ಎಲ್ಲಾ ಹೋಬಳಿ ಮಟ್ಟದಲ್ಲಿ ಉಪ ವಿದ್ಯುತ್ ಕೇಂದ್ರಗಳು, ಮುರಾರ್ಜಿ ವಸತಿ ಶಾಲೆಗಳು, ಹೊಸ ಐಬಿ,ಕಿತ್ತೂರು ರಾಣಿ ಚೆನ್ನಮ್ಮ ಶಾಲೆ , ಎಪಿಎಂಸಿ ಮಾರುಕಟ್ಟೆ ಪ್ರಾಂಗಣ, ತಾಯಿ ಮಕ್ಕಳ ಆಸ್ಪತ್ರೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇನ್ನೂ ಅನೇಕ ಯೋಜನೆಗಳನ್ನು ಗುಂಡ್ಲುಪೇಟೆ ಗೆ ಕೊಡುಗೆಯನ್ನಾಗಿ ನೀಡಿದ್ದಾರೆ ಮತ್ತು ಶ್ರಮಿಸಿದ್ದಾರೆ ಶಾಸಕರೆ ನಿಮ್ಮ ಅವಧಿಯಲ್ಲಿ ತಾಲೂಕಿಗೆ ಏನೆಲ್ಲಾ ಕೆಲಸಕಾರ್ಯಗಳು ಆಗಿವೆ ಎಂದು ಕೈಪಿಡಿ ಮೂಲಕ ತೋರಿಸಿ ನೋಡೋಣ ಎಂದರು.
ನAತರ ಚಾಮುಲ್ ಅಧ್ಯಕ್ಷ ನಂಜುAಡ ಪ್ರಸಾದ್ ಮಾತನಾಡಿ ನಮ್ಮ ಕುಟುಂಬದವರು 1978 ರಿಂದ ವಿಧಾನಸಭೆಗೆ ಸ್ಪರ್ಧಿಸಿದ್ದು ಮುಂದಿನ ಬರುವ ಮೇ 23ಕ್ಕೆ ಹನ್ನೊಂದು ಬಾರಿ ನಮ್ಮ ಕುಟುಂಬ ವರ್ಗದವರೇ ಸ್ಪರ್ಧಿಸಲಿದ್ದಾರೆ ಹಾಗಾಗಿ ಈಗಿನ ಶಾಸಕರು ನಮಗೆ ರಾಜಕೀಯ ಹೇಳಿಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ನAತರ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಕಬ್ಬಳ್ಳಿ ಮಹೇಶ್ ಮಾತನಾಡಿ ದಿವಂಗತ ಕೆಎಸ್ ನಾಗರತ್ನಮ್ಮನವರ ಸಮಾಧಿ ಹತ್ತಿರ ಸ್ವಚ್ಛತೆಯನ್ನು ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆ ಭಾಗದಲ್ಲಿ ಬರುವ ಮುಂದಿನ ಚುನಾವಣೆಗೆ ಮತ ಕಡಿಮೆಯಾಗುತ್ತದೆ ಎಂಬ ಭಯದಿಂದ ಶಾಸಕರು ಮತ್ತು ಬಿಜೆಪಿಯ ಯುವ ಕಾರ್ಯಕರ್ತರು ಈ ರೀತಿ ಕೆಲಸವನ್ನು ಮಾಡಿದ್ದಾರೆ ಇದನ್ನ ಬಿಟ್ಟು ಕೆಎಸ್ ನಾಗರತ್ನಮ್ಮನವರ ಸ್ಮಾರಕಕ್ಕೆ ಅನುದಾನವನ್ನು ಬಿಡುಗಡೆ ಮಾಡಲಿ, ಸಿದ್ದರಾಮಯ್ಯನವರು ದಿವಂಗತ ಬಿ. ರಾಚಯ್ಯನವರ ಸ್ಮಾರಕಕ್ಕೆ 2 ಕೋಟಿ ಹಣವನ್ನು ನೀಡಿದ್ದಾರೆ ಇವರು ಏಕೆ ಆ ಕೆಲಸವನ್ನು ಮಾಡಬಾರದು ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ಹೆಚ್ ಎಂ ಗಣೇಶ್ ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನಿರಾಜು, ಚಾಮುಲ್ ಅಧ್ಯಕ್ಷ ನಂಜುAಡ ಪ್ರಸಾದ್, ಕಾಂಗ್ರೆಸ್ ಮಾಧ್ಯಮ ವಕ್ತಾರರಾದ ಬಿಜಿ ಶಿವಕುಮಾರ್ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಕಬ್ಬಳ್ಳಿ ಮಹೇಶ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರುಗಳಾದ, ಕೆರೆಹಳ್ಳಿ ನವೀನ್, ಚೆನ್ನಪ್ಪ, ಚಾಮು ಲ್ ನಿರ್ದೇಶಕ ಡಿ. ಮಾದಪ್ಪ, ಕೆಂಪರಾಜು, ಜಿಕೆ ಲೋಕೇಶ್ ಗ್ರಾಮ ಪಂಚಾಯತಿ ಸದಸ್ಯ, ಯುವ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್, ನವೀನ್ ಮಾಡ್ರಹಳ್ಳಿ, ಸಹಾಯಕ ಚಂದ್ರು ,ಇನ್ನು ಮುಂತಾದ ಕಾರ್ಯಕರ್ತರು ಹಾಜರಿದ್ದರು
ವರದಿ: ಸದಾನಂದ ಕಣ್ಣಿಗಾಲ ಗುಂಡ್ಲುಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.