December 22, 2024

Bhavana Tv

Its Your Channel

ಸಾಧನೆ ಪರಿಶ್ರಮದಿಂದ ಮಾತ್ರವೇ ಸಾಧ್ಯ – ಸೋನಿಯಾ ಬೇಗಂ

ಗುoಡ್ಲುಪೇಟೆ : ಸಾಧನೆ ಪರಿಶ್ರಮದಿಂದ ಮಾತ್ರವೇ ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸೋನಿಯಾ ಬೇಗಂ ಹೇಳಿದರು .ಅವರು ಕ್ರಿಯಾ ಫೌಂಡೇಶನ್ ಹಾಗೂ ಸರ್ಕಾರಿ ಕೈಗಾರಿಕಾ ಉದ್ಯೋಗ ಮತ್ತು ತರಬೇತಿ ಸಂಸ್ಥೆ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕರಾದ ಸುಭಾಷ್ ಮಾಡ್ರಹಳ್ಳಿ ರವರು ಅನಾದಿ ಕಾಲದಿಂದಲೂ ಪುರುಷ ಪ್ರಧಾನ ಸಮಾಜ ಧರ್ಮ,ಜಾತಿ ಮುಂತಾದ ಕಟ್ಟು ಪಾಡುಗಳ ಮೂಲಕ ಮಹಿಳೆಯರನ್ನು ಶೋಷಿಸುತ್ತ ಬರಲಾಗುತ್ತಿದೆ. ಇಂದಿಗೂ ದೇವದಾಸಿ ಪದ್ಧತಿ , ಶಿಶು ಹತ್ಯೆ , ಮರ್ಯಾದೆ ಹತ್ಯೆಗಳು ಎಗ್ಗಿಲ್ಲದೆ ನಡೆಯುತ್ತಿವೆ , ಸಂವಿಧಾನದ ಮೂಲಕ ನಮಗೆ ಹಕ್ಕು ಅಧಿಕಾರಗಳು ದೊರಕಿವೆ , ಅದು ಡಾ ಅಂಬೇಡ್ಕರ್ ರವರ ಹೋರಾಟದ ಪ್ರತಿಫಲವಾಗಿವೆ. ಇಂದು ರಾಜಕೀಯ ,ಆರ್ಥಿಕ ,ಸಾಮಾಜಿಕ ಹಾಗೂ ಶೈಕ್ಷಣಿಕ ವಾಗಿ ಮಹಿಳೆಯರು ಸಾಧನೆಯನ್ನು ಮಾಡಿದ್ದಾರೆ ,ಆದರೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಗತಿ ಹೊಂದಲು ಹೋರಾಟದ ಮನೋಭಾವ ರೂಢಿಸಿಕೊಂಡು ಮುನ್ನಡೆಯ ಬೇಕು ಎಂದರು.

ಕ್ರಿಯಾ ಫೌಂಡೇಶನ್ ಕಾರ್ಯದರ್ಶಿ ಕಾಳಿಂಗ ಸ್ವಾಮಿ ಸಿದ್ದಾರ್ಥ ರವರು ಪ್ರಾಥಮಿಕವಾಗಿ ಮಾತನಾಡುತ್ತಾ ಮಹಿಳೆಯರು ಅಬಲರಲ್ಲ ,ಅವಕಾಶಗಳಿಂದ ವಂಚಿತರಾದ ಪರಿಣಾಮ ಶೋಷಣೆಗೆ ಒಳಗಾಗಿದ್ದಾರೆ . ಮನೆಯ ಮಗಳಾಗಿ ,ಸೊಸೆಯಾಗಿ ,ತಾಯಿಯಾಗಿ ಅವಳ ಸೇವೆ ಬಹಳ ಮುಖ್ಯ ಎಂದರು .
ಈ ಸಂದರ್ಭದಲ್ಲಿ ವೇದಿಕೆ ಮೇಲೆ ,ಕಾಲೇಜು ಪ್ರಭಾರ ಪ್ರಾಂಶುಪಾಲರಾದ ರಂಗನಾಥರವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್ ಸೋಮಣ್ಣ , ಅನುಪಮ , ವೇದಾವತಿ ,ಸಿದ್ದಾಪಾಜಿ ,ಅಪ್ಪು ಮುಂತಾದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ರವರು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: