
ಭಟ್ಕಳ: ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಅಬಕಾರಿ ಇಲಾಖೆ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ, ನೀರಾವರಿ ಇಲಾಖೆ, ಹೆಸ್ಕಾಂ ಇಲಾಖೆ, ಆರೋಗ್ಯ ಇಲಾಖೆ, ಜೇಸಿಸ್ ಕ್ಲಬ್ ಭಟ್ಕಳ, ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನ್ಯಾಯಾಲಯದ ಆವರಣದಲ್ಲಿ ವಿಶ್ವ ಜಲ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಸ್ತು ಪ್ರದರ್ಶನ ಕಾರ್ಯಕ್ರಮ ಅತ್ಯಂತ ಯಶಸ್ವೀಯಾಗಿ ನಡೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ ಅವರು ನೈಸರ್ಗಿಕ ಸಂಪನ್ಮೂಲವಾದ ನೀರು, ಗಾಳಿ ಹಾಗೂ ಬೆಳಕು ಪ್ರತಿಯೊಂದು ಜೀವಕ್ಕೂ ಕೂಡಾ ಅತ್ಯವಶ್ಯಕವಾಗಿದೆ. ಇವುಗಳು ಬೆಲೆ ಕಟ್ಟಲಾಗದ ಸಂಪತ್ತುಗಳಾಗಿದ್ದು ಅವುಗಳನ್ನು ನಾವು ಉಪಯೋಗಿಸಬೇಕು, ಮುಂದಿನ ಪೀಳಿಗೆಗೆ ಉಳಿಸಬೇಕು ಎನ್ನುವ ಮನೋಭಾವನೆ ನಮ್ಮಲ್ಲಿ ಮುಖ್ಯವಾಗಿ ಇರಬೇಕಾಗಿದೆ. ನಮಗೆ ಶುದ್ಧವಾದ ನೀರು ಬೇಕು, ಉಸಿರಾಡಲು ಗಾಳಿ ಬೇಕು ಇವು ಜೀವನಕ್ಕೆ ಅತ್ಯವಶ್ಯಕ ವಸ್ತುವಾಗಿದೆ ಎನ್ನುವ ಕಲ್ಪನೆಯಿಂದ ನಾವು ಅವುಗಳನ್ನು ಉಪಯೋಗಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ. ಎಲ್. ನಾಯ್ಕ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಮಾತನಾಡಿ ನಾವು ಪ್ರತಿ ವರ್ಷ ವಿಶ್ವಜಲ ದಿನಾಚರಣೆಯನ್ನು ಆಚರಿಸಿಕೊಂಡು ಬಂದಿದ್ದೇವೆ. ಪ್ರತಿ ವರ್ಷಕ್ಕಿಂತ ಈ ಬಾರಿ ವಿಶಿಷ್ಟವಾಗಿ ಆಚರಿಸಬೇಕು ಎನ್ನುವ ಹಂಬಲದೊAದಿಗೆ ಮೊಡೆ???ಗಳನ್ನು ವಿವಿಧ ಇಲಾಖೆಗಳು ಮಾಡಿದ್ದು ಅರ್ಥಪೂರ್ಣವಾಗಿದೆ. ಇವುಗಳ ಯಶಸ್ಸು ಎಲ್ಲಾ ಇಲಾಖೆಗಳಿಗೆ ಸೇರಬೇಕು ಎಂದರು.
ವಿಶೇಷವಾಗಿ ವಿಶ್ವಜಲ ದಿನದ ಮಹತ್ವವನ್ನು ಸಾರುವ ಹಾಗೂ ಜಲಸಂಪನ್ಮೂಲವನ್ನು ಉಳಿಸಿಕೊಳ್ಳುವ ವಿವಿಧ ಮಾದರಿಗಳನ್ನು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪ್ರಧಾನ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ. ನ್ಯಾಯಾಧೀಶ ಫವಾಜ್ ಪಿ.ಎ. ಮಾತನಾಡಿದರು.
ನ್ಯಾಯವಾದಿ ಎಂ.ಜೆ. ನಾಯ್ಕ ಸ್ವಾಗತಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಜೆ.ಡಿ. ಭಟ್ಟ ನಿರೂಪಿಸಿದರು. ನ್ಯಾಯವಾದಿ ಎನ್. ಎಸ್. ನಾಯ್ಕ ವಂದಿಸಿದರು.
ಜೀವಜಲ ಸಂರಕ್ಷAಣೆಯ ಕುರಿತು ವಸ್ತು ಪ್ರದರ್ಶನದಲ್ಲಿ ಒಟ್ಟೂ ೧೨ ತಂಡಗಳು ಭಾಗವಹಿಸಿದ್ದು ಇಲ್ಲಿನ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ತಂಡ ಬಹುಮಾನ ಗಳಿಸುವಲ್ಲಿ ಯಶಸ್ವೀಯಾಯಿತು.
ಅರಣ್ಯ ಇಲಾಖೆ, ನ್ಯಾಯಾಂಗ ಇಲಾಖೆ, ರಾಜ್ಯ ಸರಕಾರಿ ನೌಕರರ ಸಂಘ, ವಕೀಲರ ಸಂಘ, ಶಿಕ್ಷಣ ಇಲಾಖೆ, ತಾಲೂಕಾ ಆಸ್ಪತ್ರೆ, ಜಾಲಿ ಪಟ್ಟಣ ಪಂಚಾಯತ್, ಜಲಜೀವನ್ ಮೆಶಿನ್ ಯೋಜನೆ, ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಭಟ್ಕಳ ಸಿಟಿ ಜೇಸಿಸ್ ಭಾಗವಹಿಸಿದ್ದು ವಿವಿಧ ರೀತಿಯ ಜೀವಜಲ ಉಳಿಸುವ ಪ್ರಾತ್ಯಕ್ಷಿತೆ ಎಲ್ಲರ ಗಮನ ಸೆಳೆಯಿತು.
ಸಂಘಟಕರು ಪ್ರಾತ್ಯಕ್ಷಿತೆಯನ್ನು ನೀಡಿದರವಲ್ಲಿ ಬಹುಮಾನ ಘೋಷಣೆ ಮಾಡಿದ್ದು ಬಹುಮಾನವನ್ನು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನರಸಿಂಹ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಉಪನ್ಯಾಸಕಿ ರಶ್ಮಿ ಎ.ಆರ್. ಅವರ ನೇತೃತ್ವದ ತಂಡ ಸೌಮ್ಯ ಸ್ಯಾಮ್ಯುವೆಲ್, ನೂತನ, ಸಂಧ್ಯಾ, ಅನ್ನಪೂರ್ಣ, ರೇಶ್ಮಾ ಹಾಗೂ ಸಹನ ಅವರು ನಿರುಪಯುಕ್ತ ನೀರಿನ ಬಳಕೆಯ ಕುರಿತು ಪ್ರಾತ್ಯಕ್ಷಿತೆಯ ಮೋಡೆಲ್ನ್ನು ಪ್ರದರ್ಶಿಸಿದ್ದರು.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ