December 21, 2024

Bhavana Tv

Its Your Channel

ಸಾರ್ವಜನಿಕರ ಗಮನಕ್ಕೆ : ಈ ನಂಬರ್ ಗೆ ಕರೆ ಮಾಡಿದರೆ ಮನೆ ಬಾಗಿಲಿಗೇ ಬರಲಿವೆ ಅಗತ್ಯ ವಸ್ತುಗಳು!

ಬೆಂಗಳೂರು : ಲಾಕ್ ಡೌನ್ ನಿಂದಾಗಿ ಅಗತ್ಯ ವಸ್ತುಗಳು ಸಿಗದೇ ಕಷ್ಟದಲ್ಲಿರುವ ನಗರದ ಜನತೆಗೆ ಬೆಂಗಳೂರು ಮಹಾನಗರ ಪಾಲಿಕೆ ಸಿಹಿಸುದ್ದಿ ನೀಡಿದ್ದು, ಅಗತ್ಯ ವಸ್ತುಗಳನ್ನು ಪೂರೈಸುವ ಸಹಾಯವಾಣಿಯನ್ನು ಆರಂಭಿಸಿದೆ.

ಜನರು ಹೋಂ ಡೆಲಿವರಿ ಸಹಾಯವಾಣಿ 080-61914960 ಸಂಖ್ಯೆಗೆ ಕರೆ ಮಾಡಿದರೆ ದಿನಸಿ, ತರಕಾರಿ,ಔಷಧಿ ಮುಂತಾದ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ 10 ರೂ. ಸೇವಾಶುಲ್ಕ ಪಡೆಯಲಾಗುತ್ತದೆ.

ಖಾಸಗಿ ಏಜೆನ್ಸಿಯ ಸಹಯೋಗದಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ. ಇದಕ್ಕಾಗಿ 5 ಸಾವಿರ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಸೇವೆಯನ್ನು ಒದಗಿಸಲು 18 ಸಾವಿರ ವರ್ತಕರ ಜೊತೆಗೆ ಮಾತುಕತೆ ನಡೆಸಿ ನೋಂದಾಯಿಸಿಕೊಳ್ಳಲಾಗಿದೆ.

source : daily hunt

error: