
ಬೆಂಗಳೂರು : ಲಾಕ್ ಡೌನ್ ನಿಂದಾಗಿ ಅಗತ್ಯ ವಸ್ತುಗಳು ಸಿಗದೇ ಕಷ್ಟದಲ್ಲಿರುವ ನಗರದ ಜನತೆಗೆ ಬೆಂಗಳೂರು ಮಹಾನಗರ ಪಾಲಿಕೆ ಸಿಹಿಸುದ್ದಿ ನೀಡಿದ್ದು, ಅಗತ್ಯ ವಸ್ತುಗಳನ್ನು ಪೂರೈಸುವ ಸಹಾಯವಾಣಿಯನ್ನು ಆರಂಭಿಸಿದೆ.
ಜನರು ಹೋಂ ಡೆಲಿವರಿ ಸಹಾಯವಾಣಿ 080-61914960 ಸಂಖ್ಯೆಗೆ ಕರೆ ಮಾಡಿದರೆ ದಿನಸಿ, ತರಕಾರಿ,ಔಷಧಿ ಮುಂತಾದ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸಲಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ 10 ರೂ. ಸೇವಾಶುಲ್ಕ ಪಡೆಯಲಾಗುತ್ತದೆ.
ಖಾಸಗಿ ಏಜೆನ್ಸಿಯ ಸಹಯೋಗದಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗುತ್ತದೆ. ಇದಕ್ಕಾಗಿ 5 ಸಾವಿರ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಈ ಸೇವೆಯನ್ನು ಒದಗಿಸಲು 18 ಸಾವಿರ ವರ್ತಕರ ಜೊತೆಗೆ ಮಾತುಕತೆ ನಡೆಸಿ ನೋಂದಾಯಿಸಿಕೊಳ್ಳಲಾಗಿದೆ.
source : daily hunt
More Stories
ಮೇ ೨೨ ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಸಭೆ ಅಧಿವೇಶನ, ಹಂಗಾಮಿ ಸಭಾಧ್ಯಕ್ಷರಾಗಿ ಆರ್ ವಿ ದೇಶಪಾಂಡೆ :
ವಿ. ಕೃ. ಗೋಕಾಕರ ಜೀವನ ಮತ್ತು ಸಾಹಿತ್ಯದ ಬಗೆಗೆ ಉಪನ್ಯಾಸ ಕಾರ್ಯಕ್ರಮ
ಬೊಮ್ಮನಹಳ್ಳೀ ಶಾಸಕ ಸತೀಶ್ ರೆಡ್ಡಿ ನಾಲ್ಕನೇ ಬಾರಿ ಆಯ್ಕೆಗೆ ನಾಮಪತ್ರ ಸಲ್ಲಿಕೆ,