July 11, 2024

Bhavana Tv

Its Your Channel

ಭಾರತೀಯ ಜನತಾ ಪಾರ್ಟಿಯ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರನ್ನಾಗಿ ಕೆ.ಆರ್. ವೆಂಕಟೇಶ್‌ಗೌಡ, ಬೆಂಗಳೂರು, ನೇಮಕ

ಬೆಂಗಳೂರು: ವಿಚಾರವಂತರು, ಉದ್ಯಮಿಗಳು, ಸಾಹಿತಿಗಳು, ಕಲಾಪೋಷಕರು ಹಾಗೂ ಬಹುಮುಖ ವ್ಯಕ್ತಿತ್ವದ ಸಮಾಜಮುಖಿ ಚಿಂತಕರಾಗಿರುವ ಡಾ. ಕೆ .ಆರ್ ವೆಂಕಟೇಶ್ ಗೌಡ ರವರಿಗೆ ಭಾರತೀಯ ಜನತಾ ಪಾರ್ಟಿಯ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರನ್ನಾಗಿ ನೇಮಕ ಮಾಡಿ ಬಿ.ವೈ. ವಿಜಯೇಂದ್ರ ರಾಜ್ಯ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ.

ಭಾರತೀಯ ಜನತಾ ಪಕ್ಷದಲ್ಲಿ ತಮ್ಮನ್ನು ಗುರುತಿಸಿಕೊಂಡು ಅಲ್ಲಿ ತಮ್ಮ ಆಲೋಚನೆಗಳಿಗೆ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಎಂತವರನ್ನು ಬೇಕಾದರೂ ಧಿಕ್ಕರಿಸುವಂತಹ ಮನೋ ಬಲವನ್ನು ಹೊಂದಿದ್ದಾರೆ. ಹಾಗಾಗಿಯೇ ಇವರು ನಿಷ್ಠೂರವಾದಿ, ನೇರ ನುಡಿಯ ಮನುಷ್ಯ ಎಂದು ಗುರುತಿಸಿ ಕೊಂಡಿದ್ದಾರೆ. ಅಶ್ವವೇಗ ಸಂಸ್ಥೆಯ ಮೂಲಕ ಪರಿಸರ ಸ್ನೇಹಿ ವಾಹನಗಳನ್ನು ಅಂದರೆ ಎಲೆಕ್ಟ್ರಾನಿಕ್ ವಾಹನಗಳನ್ನು ಮಾರಾಟ ಮಾಡುವ ಸಂಸ್ಥೆಯ ಒಡೆಯರಾಗಿದ್ದಾರೆ.
ಇವರ ಸಾಮಾಜಿಕ, ಶೈಕ್ಷಣಿಕ, ಸಾಹಿತ್ಯ, ರಾಜಕೀಯ, ಉದ್ಯಮ ಹೀಗೆ ಎಲ್ಲ ಕ್ಷೇತ್ರಗಳ ಸಾಧನೆ ನ ಗುರುತಿಸಿ ಇವರಿಗೆ ಗೌರವ ಡಾಕ್ಟರೇಟ್ ಸಹ ನೀಡಲಾಗಿದೆ. ಅಖೀಲ ಕರ್ನಾಟಕ ಒಕ್ಕಲಿಗ ಪದವೀಧರ ವೇಧಿಕೆಯ ರಾಜ್ಯಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ,
” ಪ್ರೇರಣಾ ಫೌಂಡೇಶನ್ ಎನ್ನುವ ವಿಶೇಷವಾದ ವಿನೂತನ ಸಕಾ9ರೇತರ ಸಂಸ್ಥೆಯನ್ನು ಕಟ್ಟಿ ಶೈಕ್ಷಣಿಕವಾಗಿ ಪ್ರಗತಿಯ ಹೆಜ್ಜೆಯನ್ನು ಇಡುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ, ಉದ್ಯೋಗಾಕಾಂಕ್ಷಿಗಳಿಗೆ ವ್ಯಕ್ತಿತ್ವ ವಿಕಸನ ತರಬೇತಿಯನ್ನು ಅಂದರೆ ಸಂದಶ9ನ ಎದುರಿಸುವ ಕಲೆ, ಮಾತನಾಡುವ, ಚಚಿ9ಸುವ ಕಲೆ, ಯಶಸ್ಸಿನ ಸೂತ್ರವನ್ನು ಉಚಿತವಾಗಿ ಜ್ಞಾನವನ್ನು ನೀಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.
ರಾಜ್ಯ ಮತ್ತು ರಾಷ್ಟ್ರದ ಅನೇಕ ಪ್ರಶಸ್ತಿಗಳಿಗೆ ಇವರು ಬಾಜಿನರಾಗಿದ್ದಾರೆ. ನಾಡಿನ ಮಠಮಾನ್ಯರ, ಸಾಹಿತಿಗಳ, ವಿದ್ವಾಂಸರ, ರಾಜಕೀಯ ಮುತ್ಸದಿಗಳ,ಗಣ್ಯಾತಿ ಗಣ್ಯರ ಸಂಪರ್ಕ ಸ್ನೇಹ ವಿಶ್ವಾಸವನ್ನು ಗಳಿಸಿಕೊಂಡಿದ್ದಾರೆ.
ಈ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಯನ್ನು ತಳಮಟ್ಟದಲ್ಲಿ ಸಧೃಢಗೊಳಿಸುತ್ತಾ, ಮುಂಬರುವ ಎಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸುವಿರೆಂದು ಆಶಿಸುತ್ತೇನೆ ಎಂದು ಬಿ.ವೈ. ವಿಜಯೇಂದ್ರ ರಾಜ್ಯ ಅಧ್ಯಕ್ಷರು ತಮ್ಮ ಆಶಯವನ್ನು ವ್ಯಕ್ತಪಡಿಸಿ ಪತ್ರ ರವಾನಿಸಿದ್ದಾರೆ.

error: