ಬಾದಾಮಿ :- ಯುವಾ ಬ್ರಿಗೇಡ್ ತಾಲೂಕಾ ಘಟಕ ಬಾದಾಮಿ ವತಿಯಿಂದ ಪ್ರಯಾಣಿಕರ ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾಯಿತು.
ಇತ್ತೀಚೆಗಿನ ಜಾಗತಿಕ ಬೆಳವಣಿಗೆಯಿಂದ ಬಿಸಿಲಿನ ಪ್ರಮಾಣ ಹೆಚ್ಚಾಗುತ್ತಿದ್ದೂ, ಬೇಸಿಗೆ ಕಾಲದಲ್ಲಿ ಕುಡಿಯಲು ನೀರಿನ ಸಮಸ್ಯೆ ಕೂಡ ಹೆಚ್ಚಾಗಿದೆ ಈ ಒಂದು ಸಮಸ್ಯೆಗೆ ಪರಿಹಾರವಾಗಿ ಯುವಾ ಬ್ರಿಗೇಡ್ ತಾಲೂಕ ಘಟಕ ಬಾದಾಮಿ ಇಂದು ಬೇಲೂರಿನಲ್ಲಿ ಕುಡಿಯುವ ನೀರಿನ ಅರವಟಗಿ ಕೇಂದ್ರವನ್ನು ಸ್ಥಾಪನೆ ಮಾಡಿ, ಪ್ರಯಾಣಿಕರ ದಾಹ ತಣಿಸುವ ಕಾರ್ಯವನ್ನು ಮಾಡಿದ್ದು, ಈ ಕಾರ್ಯವು ಜನರಿಗೆ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಾರ್ಯದಲ್ಲಿ ಆರ್ ಎಸ್ ಎಸ್ ನ ಸ್ವಯಂ ಸೇವಕರು ಹಾಗೂ ಬೇಲೂರ್ ಗ್ರಾಮದ ಯುವ ಮುಖಂಡರಾದ ಅರುಣ್ ತೆಂಗಿನಕಾಯಿ, ಗಿರೀಶ ಗಾಣಿಗೇರ, ಉಮೇಶ ಕುಂಬಾರ, ಬಿ ಬಿ ಮುದಕನಗೌಡರ,ಕುಮಾರ ಪವಾಡ ಶೆಟ್ಟಿ,, ಮುತ್ತಪ್ಪ ಪೂಜಾರ, ಸಂಗಮೇಶ ಬಡಿಗೇರ, ಮುತ್ತಪ್ಪ ಮಾಡಣ್ಣವರ, ಶಿವು ಹಿರೇಮಠ, ಕಿರಣ್ ಮರಡಿ ಹಾಗೂ ಯುವ ಬ್ರಿಗೇಡ್ ನ ಕಾರ್ಯಕರ್ತರು ಪಾಲ್ಗೊಂಡಿದ್ದರು.
ವರದಿ:- ರಾಜೇಶ್.ಎಸ್ ದೇಸಾಯಿ ಬಾದಾಮಿ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ಬಾದಾಮಿಯಲ್ಲಿ “ದಿ ಕಾಶ್ಮೀರ್ ಫೈಲ್ಸ್ “ಚಲನಚಿತ್ರಕ್ಕೆ ಹಿಂದೂ ಸಂಘಟನೆಗಳು ನಾಡದೇವತೆ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ಶ್ಲೋಕ ಹೇಳಿ ಚಾಲನೆ