December 22, 2024

Bhavana Tv

Its Your Channel

ಮಡಿವಾಳ ಸಂಘದಿOದ ಸರಕಾರದ ಸವಲತ್ತು ನೀಡಿ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸುವಂತೆ ಶಾಸಕ ದಿನಕರ ಶೆಟ್ಟರಿಗೆ ಮನವಿ

ಹೊನ್ನಾವರ ; ಕರೋನಾ ಹಿನ್ನೆಲೆಯಲ್ಲಿ ಸರಕಾರ ಲಾಕ್ ಡೌನ್ ಘೋಷಣೆ ಮಾಡಿರುವದರಿಂದ ಹೊನ್ನಾವರ ತಾಲೂಕಿನ ಎಲ್ಲ ಲಾಂಡ್ರಿಗಳನ್ನೂ ಬಂದ ಮಾಡಲಾಗಿದೆ .ದಿನನಿತ್ಯ ಕುಲಕಸುಬು ಮಾಡಿ ದುಡಿದು ಕುಟುಂಬ ನಿರ್ವಹಣೆ ಮಾಡುವ ಮಡಿವಾಳರು ಕಳೆದ ಒಂದು ತಿಂಗಳಿನಿoದ ಇತ್ತ ಕೆಲಸವೂ ಇಲ್ಲದೆ ಕೈಯಲ್ಲಿ ಕಾಸೂ ಇಲ್ಲದೇ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ .ತಾಲೂಕಿನ ಸುಮಾರು ನೂರಾರು ಬಡ ಕುಟುಂಬಗಳು ಈ ವೃತ್ತಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ .ಆದರೆ ಕಳೆದ ಒಂದು ತಿಂಗಳಿನಿoದ ಮುಂದಿನ ಮೇ ೩ ರ ವರೆಗೆ ಲಾಕ್ ಡೌನ್ ಜಾರಿಯಲ್ಲಿ ಇರುವದರಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರಕಾರ ಅಥವಾ ಯಾವದೇ ಜನಪ್ರತಿನಿದಿಗಳು ಇನ್ನೂವರೆಗೆ ಬಂದಿಲ್ಲ.
ಆದ್ದರಿಂದ ಹೊನ್ನಾವರ ತಾಲೂಕಾ ಮಡಿವಾಳರ ಸಂಘದ ಪರವಾಗಿ ಅಧ್ಯಕ್ಷರಾದ ನಾಗೇಶ್ ಮಡಿವಾಳರು ಮಾನ್ಯ ಶಾಸಕರಾದ ಶ್ರೀ ದಿನಕರ ಶೆಟ್ಟಿ ಮತ್ತು ತಹಶೀಲ್ದಾರರಾದ ಶ್ರೀ ವಿವೇಕ ಶೇನ್ವಿ ಯವರಿಗೆ ಮನವಿ ಸಲ್ಲಿಸಿದ್ದು ಸರಕಾರದ ಸವಲತ್ತು ನೀಡಿ ಜೀವನ ನಿರ್ವಹಣೆಗೆ ಅನುಕೂಲ ಕಲ್ಪಿಸುವಂತೆ ವಿನಂತಿಸಿಕೊoಡಿದ್ದಾರೆ .

error: