November 29, 2023

Bhavana Tv

Its Your Channel

ಹೊನ್ನಾವರ ರೋಟರಿಯಿಂದ ಬಡವರಿಗೆ ದಿನಸಿ ಸಾಮಾನು ವಿತರಣೆ

ಲಾಕ್ ಡೌನಿನಿಂದಾಗಿ ದಿನಗೂಲಿ ಕಾರ್ಮಿಕರು ಕೆಲಸವಿಲ್ಲದೆ ಬದುಕು ಸಾಗಿಸಲು ಕಷ್ಟಪಡುತ್ತಿದ್ದರು. ಇದನ್ನು ಮನಗಂಡ ಹೊನ್ನಾವರದ ರೋಟರಿ ಕ್ಲಬ್ಬು ಇಂತಹ 125 ಕಾರ್ಮಿಕರ ಕುಟುಂಬಗಳಿಗೆ ದಿನಸಿ ಸಾಮಾನುಗಳ ಪೊಟ್ಟಣಗಳನ್ನು ಇತ್ತೀಚೆಗೆ ವಿತರಿಸಿತು. ಚಾಂದ್ರಾಣಿಯಲ್ಲಿ 110 ಕುಟುಂಬಗಳಿಗೆ, ಆರೊಳ್ಳಿಯ 10 ಕುಟುಂಬಗಳಿಗೆ ಮತ್ತು ಮೂರುಕಟ್ಟೆಯ 5 ಕುಟುಂಬಗಳಿಗೆ ತಲಾ 400 ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳ ಪೊಟ್ಟಣಗಳನ್ನು ವಿತರಿಸಲಾಯಿತು.


ಕ್ಲಬ್ಬಿನ ಬಹುತೇಕ ಸದಸ್ಯರು ಅಧ್ಯಕ್ಷ – ಕಾರ್ಯದರ್ಶಿಗಳೊಂದಿಗೆ ಈ ಸೇವಾಕಾರ್ಯದಲ್ಲಿ ಕೈ ಜೋಡಿಸಿದ್ದರು. ಅಲ್ಲದೇ ವಿತರಣೆ ಸಂದರ್ಭದಲ್ಲಿ ಹಾಜರಿದ್ದು ಸಹಕರಿಸಿದರು.

error: