
ಕುಮಟಾ ; ಜಗತ್ತಿನಾದ್ಯಂತ ಕೋರೋನಾ ಮಹಾಮಾರಿಯಿಂದ ಬಹಳಷ್ಟು ಜನರು ತೊಂದರೆಗಿಡಾಗಿದ್ದಾರೆ.ಇಡೀ ದೇಶವೇ ಲಾಕ್ ಡೌನ್ ಆಗಿರುವ ಸಮಯದಲ್ಲಿ ನಮ್ಮ ತಾಲ್ಲೂಕಿನ ಹಾಗೂ ಹೊನ್ನಾವರ ತಾಲ್ಲೂಕಿನ ಕೆಲ ಭಾಗಗಳಲ್ಲಿ ಕೂಡ ನಮ್ಮ ಸಮಾಜದ ಹಲವು ಕುಟುಂಬದವರು ದಿನ ನಿತ್ಯ ಕೆಲಸ ಕಾರ್ಯದಿಂದ ಕುಟುಂಬದ ನಿರ್ವಹಣೆ ಮಾಡುತ್ತ ದಿನ ಕಳೆಯುತ್ತಿದ್ದ ಸದಸ್ಯನಿಗೆ ಕೆಲಸವಿಲ್ಲದೆ ತೊಂದರೆ ಅಗಿದೆ. ಆದ್ದರಿಂದ ಅತಂಹ ಕುಟುಂಬಕ್ಕೆ ಸ್ವಲ್ಪ ಮಟ್ಟಿಗಾದರೂ ಸಹಕಾರ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಆನಿಟ್ಟಿನಲ್ಲಿ ಅತಂಹ ಕುಟುಂಬಕ್ಕೆ ತೀರ ಅಗತ್ಯವುಳ್ಳ ದಿನಸಿ ಸಾಮಗ್ರಿಗಳ ಕಿಟ್ ಹಾಗೂ ಮನೆ ಬಳಕೆ ಕಿಟ್ ಅಂದಾಜು ರೂ1000/- ಮೇಲ್ಪಟ್ಟ ವ್ಯವಸ್ಥೆ ಗಾಣಿಗ ಯುವ ಬಳಗ ಕುಮಟಾ ಇದರ ವತಿಯಿಂದ ವಿತರಣೆ ಮಾಡಲಾಯಿತು .

ಅತೀ ಅವಶ್ಯಕ ವಸ್ತುಗಳ ಕಿಟ್ ಗಳನ್ನು ಸತತ ನಾಲ್ಕು ದಿನಗಳಿಂದ ನಿರಂತರವಾಗಿ119 ಕುಟುಂಬಗಳಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಸಮಾಜ ಬಾಂಧವರು ಅತ್ಯಂತ ಸಹಕಾರ ನೀಡಿದ್ದಾರೆ ಈ ಸಂದರ್ಭದಲ್ಲಿ ಯುವ ಗಾಣಿಗ ಬಳಗ ಕುಮಟಾ ಇದರ ಸದಸ್ಯರಾದ ಗಣಪತಿ ಶೆಟ್ಟಿ.ರವಿಕುಮಾರ ಶೆಟ್ಟಿ. ಗೌತಮ್ ಶೆಟ್ಟಿ.ದತ್ತು ಶೆಟ್ಟಿ.ವಿನಾಯಕ ಶೆಟ್ಟಿ.ಗಣೇಶ ಶೆಟ್ಟಿ. ಶ್ರೀದರ ಶೆಟ್ಟಿ. ಕಿಶೋರ್ ಶೆಟ್ಟಿ ಗಣೇಶಪ್ರಸಾದ ಶೆಟ್ಟಿ.ಪವನ ಶೆಟ್ಟಿ ರಾಜು ಶೆಟ್ಟಿ. ಸುನೀಲ ಶೆಟ್ಟಿ.ನಾಗರಾಜಶೆಟ್ಟಿ. ವಿನೋದ ಶೆಟ್ಟಿ ರಾಘು ಶೆಟ್ಟಿ ಮಾರುತಿ ಶೆಟ್ಟಿ.ಸಂತೋಷ ಶೆಟ್ಟಿ ಹಾಗೂ ಸದಸ್ಯ ಮಿತ್ರರು ಹಾಜರಿದ್ದರು
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.