
ಭಟ್ಕಳ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹಾಗೂ ಸಾರಸ್ವತ ಸಮಾಜದ ಗುರು ಮಠ ಚಿತ್ರಾಪುರ ಮಠದ ಭವಾನಿಶಂಕರ ದೇವರ ೧೦೧ನೇ ಮಹಾರಥೋತ್ಸವ ಶನಿವಾರ ಸಂಜೆ ಅದ್ಧೂರಿಯಿಂದ ಸಂಪನ್ನಗೊoಡಿತು.

ರಥೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ.೧೧ರಂದುಧ್ವಜಾರೋಹಣದೊAದಿಗೆ ಆರಂಭವಾಗಿದ್ದವು. ನಂತರ ಪ್ರತಿದಿನ ಉತವಾದಿಗಳು ನಡೆದು ಶನಿವಾರ ಬೆಳಿಗ್ಗೆ ರಥಾರೋಹಣ ಕಾರ್ಯಕ್ರಮ ನಡೆದು ಸಂಜೆ ೫ ಗಂಟೆಗೆ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಮಹಾರಥೋತ್ಸವ ಜರುಗಿತು. ರಥೋತ್ಸವದ ಬೆಳಿಗ್ಗೆಯಿಂದಲೇ ದೇವರ ಹಾಗೂ ನಿಮಿತ್ತ ಭಕ್ತರು ಮಠಕ್ಕೆ ಆಗಮಿಸಿ ಶ್ರೀಗಳ ದರ್ಶನ ಪಡೆದು ನಂತರ ರಥಕಾಣಿಕೆ ಸಲ್ಲಿಸಿದರು.
ರಥೋತ್ಸವದಲ್ಲಿ ಮಠದ ಜನರಲ್ ಮ್ಯಾನೇಜರ್ ನಾರಾಯಣ ಮಲ್ಲಾಪುರ,ಆಡಳಿತ ಕಮಿಟಿ ಅಧ್ಯಕ್ಷ ಪ್ರವೀಣ ಕಡ ಲೋಕಲ್ ಸಭಾ ಅಧ್ಯಕ್ಷ ಸತೀಶ ಕೊಪ್ಪಿಕರ ಸೇರಿದಂತೆ ಮಠದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಭಕ್ತರು, ಊರಿನ ಗಣ್ಯರು ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದ ನಂತರದಲ್ಲಿ ನಡೆದ ಧರ್ಮ ಸಭೆಯಲ್ಲಿ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಆಶೀರ್ವಚನ ನೀಡಿದರು.
ಏ.೧೭ರಂದು ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಪಂಚವಟಿಯಲ್ಲಿ ಮೃಗಭೇಟೆ ಉತ್ಸವ ಕಾರ್ಯಕ್ರಮವಿದ್ದು, ಏ.೧೮ರಂದು ಅವಕೃತ ಸ್ನಾನ ಧ್ವಜಾವರೋಹಣ, ದೀಪ ನಮಸ್ಕಾರ, ಅಷ್ಟಾವಧಾನ ಸೇವೆಯೊಂದಿಗೆ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ.
More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ