ಗುಂಡ್ಲುಪೇಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಇದೆ ಮೊದಲ ಬಾರಿಗೆ ಬಿಜೆಪಿ 6 ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ ಅಲ್ಲದೆ ಕಾಂಗ್ರೆಸ್ ಪಕ್ಷವು ಕೂಡ 6 ಸಮ ಬಲವನ್ನು ತೆಗೆದುಕೊಂಡಿದೆ. ಬಿಜೆಪಿಯ ಆರು ಕ್ಷೇತ್ರಗಳಾದ ಕಬ್ಬಹಳ್ಳಿ, ಸೋಮಹಳ್ಳಿ ,ಕುಂದಕೆರೆ, ಬೊಮ್ಮಲಾಪುರ ,ಕಣ್ಣೇಗಾಲ, ಹಾಗೂ ವರ್ತಕರ ಕ್ಷೇತ್ರ,. ಇನ್ನುಳಿದ ಕಾಂಗ್ರೆಸ್ ಪಾಲಾದ ಕ್ಷೇತ್ರಗಳೆಂದರೆ ಬೇಗೂರು, ವಿಜಯಪುರ, ಹೊರೆ ಯಾಲ,ಬರಗಿ ,ಹ0ಗಳ, ತೆರಕಣಾಂಬಿ, ಸಮ ಬಲವನ್ನು ತೆಗೆದುಕೊಂಡಿದ್ದಾರೆ. ಕಣ್ಣೇಗಾಲ ಕ್ಷೇತ್ರದಿಂದ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಅರಸಶೆಟ್ಟಿ ಯವರು ಜಯಗಳಿಸಿದ್ದಾರೆ, ವರ್ತಕರ ಕ್ಷೇತ್ರದಿಂದ ಮಾಡ್ರಹಳ್ಳಿ ಮಹಾದೇವಪ್ಪನವರು ತಮಗೆ ಮತ ನೀಡಿದ ವರ್ತಕರಿಗೆ ಧನ್ಯವಾದಗಳನ್ನ ಈ ಮೂಲಕ ತಿಳಿಸಿದ್ದಾರೆ.
ವರದಿ: ಸದಾನಂದ ಕನ್ನೆಗಾಲ ಗುಂಡ್ಲಪೇಟೆ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.