March 14, 2025

Bhavana Tv

Its Your Channel

ಅಕ್ರಮ ಮಾಂಸ ಸಾಗಾಟ, ಒಮಿನಿ ವಶ

ಹೊನ್ನಾವರ ; ತಾಲೂಕಿನ ಕುಳಕೋಡ್ ಕ್ರಾಸ್ ಹತ್ತಿರ ರವಿವಾರ ಬೆಳಿಗ್ಗೆ ೬-೩೦ ರ ಸುಮಾರಿಗೆ ಅಕ್ರಮವಾಗಿ ಮಾರುತಿ ಒಮಿನಿಯಲ್ಲಿ ಮಾಂಸ ಸಾಗಾಟ ಮಾಡುವಾಗ ಹೊನ್ನಾವರ ಪೊಲೀಸ್‌ರು ವಾಹನ ಸಮೇತ ಮಾಂಸವನ್ನು ವಶಪಡಿಸಿಕೊಂಡ ಘಟಣೆ ನಡೆದಿದೆ.
ಹೊನ್ನಾವರ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಹಾಗೂ ಸಂಚಾರಿ ಪಿಎಸ್‌ಐ ಮಹಾಂತೇಶ ನಾಯಕ ಇವರು ತಪಾಸಣೆ ನಡೆಸುವ ಕಾಲಕ್ಕೆ ಈ ಕ್ರತ್ಯ ಬೆಳಕಿಗೆ ಬಂದಿದೆ.
ಶ್ರೀ ಮಂಹತೇಶ ಉದಯ ನಾಯ್ಕ ಪಿ.ಎಸ್.ಐ ಹೊನ್ನಾವರ ಪೊಲೀಸ್ ಠಾಣಿ ಅವರು ನೀಡಿದ ದೂರಿನಲ್ಲಿ ದಿನಾಂಕ ೦೧-೦೦-೨೦೨೨ ರಂದು ಬೆಳಗ್ಗೆ ೦೬-೩೦ ಗಂಟೆಯ ಸುಮಾರಿಗೆ ಆರೋಪಿತರಾದ ವಾಹನ ನಂಬರ್ ಕೆ.ಎ೪೭/೦೯-೪೬೦೦ ನೇದರ ಚಾಲಕ ಮತ್ತು ಮಾಲಕರು ಹೆಸರು ತಿಳಿದು ಬಂದಿರುವುದಿಲ್ಲ. ಇಬ್ಬರೂ ಸೇರಿ ಓಮಿನಿ ವಾಹನದಲ್ಲಿ ಅಂದಾಜು ೨೭೦೦೦-೦೦ ರೂಪಾಯ ಸುಮಾರು ೧೫೦ ಕೆ.ಜಿ. ಮಾಂಸವನ್ನು ತುಂಬಿ ಮಾರಾಟ ಮಾಡುವ ಉದ್ದೇಶದಿಂದ ಪಕ್ಷಮ ಪ್ರಾಧಿಕಾರದಿಂದ ಸಾಗಾಟ ಮಾಡಲು ಪರವಾನಿಗೆ ಪಡೆಯದೇ ವಾಹನದಲ್ಲಿ ತುಂಬಕೊAಡು ಗೇರುಸೊಪ್ಪಾ ದಿಂದ ಹೊನ್ನಾವರದ ಕಡೆಗೆ ಓಮಿನಿ ವಾಹನವನ್ನು ಅತೀವೇಗ ಹಾಗೂ ಅಜಾರುಕತೆಯಿಂದ ಚಲಾಯಿಸಿಕೊಂಡು ಬರುತ್ತಿದ್ದರು ಎನ್ನಲಾಗಿದೆ, ಹೊನ್ನಾವರ ತಾಲುಕಿನ ಕುಳಕೋಡ ಗ್ರಾಮದ ಹತ್ತಿರ ರಾಷ್ಟ್ರೀಯ ಹೆದ್ದಾರಿ ೬೯ ರ ಮೇಲೆ ವಾಹನಗಳ ತಪಾಸಣೆ ಕಾಲಕ್ಕೆ ಒಮಿನಿ ವಾಹನವನ್ನು ನಿಲ್ಲಿಸಲು ಕೈಮಾಡಿದಾಗ ವಾಹನವನ್ನು ಸ್ಥಳದ ಬಿಟ್ಟು ಓಡಿ ಪರಾರಿ ಆಗಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಶಶಿಕುಮಾರ ತನಿಖೆ ಮುಂದುವರಿಸಿದ್ದಾರೆ,

error: