December 20, 2024

Bhavana Tv

Its Your Channel

ಗುಂಡ್ಲುಪೇಟೆ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆದ ಬಸವ ಜಯಂತಿ ಆಚರಣೆ

ಗುಂಡ್ಲುಪೇಟೆ ಪಟ್ಟಣದ ಜೆಎಸ್ ಎಸ್ ಕಾಲೇಜು ಆವರಣದಲ್ಲಿ ಬಸವಜಯಂತಿಯನ್ನು ಬೆಳ್ಳಿ ರಥದ ಮೂಲಕ ಬಸವೇಶ್ವರರ ಭಾವಚಿತ್ರವನ್ನು ಕೂರಿಸಿ ಅಲಂಕಾರವನ್ನು ಮಾಡಿ ಅದ್ದೂರಿಯಾಗಿ ಬಸವಜಯಂತಿಗೆ ಶಾಸಕ ಸಿಎಸ್ ನಿರಂಜನ್ ಕುಮಾರ್ ಚಾಲನೆ ನೀಡಿದರು

ಸುಮಾರು ೨೦ಕ್ಕೂ ಹೆಚ್ಚು ಕಲಾತಂಡಗಳೊAದಿಗೆ ಬಸವೇಶ್ವರರ ಭಾವಚಿತ್ರವನ್ನು ಕೂರಿಸಿ ಡೊಳ್ಳು ಕುಣಿತ, ವೀರಗಾಸೆ ,ಸತ್ತಿಗೆ ಸುರಿ ಪನಿ,ನಗರಿ ವಾದ್ಯಗಳ ಮೂಲಕ ಹತ್ತಕ್ಕೂ ಹೆಚ್ಚು ನಂದಿಕAಬ ಹಾಗೂ ಜಾನಪದ ಕಲಾ ತಂಡಗಳೊAದಿಗೆ ಬಸವೇಶ್ವರ ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಇದೇ ಸಮಯದಲ್ಲಿ ೨೦ರಿಂದ ೨೫ ಸಾವಿರ ಭಕ್ತರು ನೆರೆದಿದ್ದರು. ನಂತರ ಈ ಕಾರ್ಯಕ್ರಮಕ್ಕೆಕೆಲವು ಬೀದಿಗಳಲ್ಲಿ ಮುಸ್ಲಿಂ ಮುಖಂಡರುಗಳು ಸ್ವಯಂಪ್ರೇರಣೆಯಿAದ ಬಂದು ಭಾಗವಹಿಸಿ ಬಸವೇಶ್ವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿ ಸರ್ವ ಜನಾಂಗದ ಶಾಂತಿಯ ತೋಟ ಎಂಬAತೆ ಪಟ್ಟಣದಲ್ಲಿಶಾಂತಿಯ ಸಂಕೇತವಾದರು.

ಈ ಸಂದರ್ಭದಲ್ಲಿ ಶಾಸಕ ಸಿಎಸ್ ನಿರಂಜನ್ ಕುಮಾರ್, ಯುವ ಮುಖಂಡರಾದ ಎಚ್ ಎ೦ ಗಣೇಶ್ ಪ್ರಸಾದ್, ನಂಜುAಡ ಪ್ರಸಾದ್, ವೀರಶೈವ ಮುಖಂಡ ಶಿವಬಸಪ್ಪ,ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷರಾದ ಎಚ್ ಎಸ್ ನಂಜಪ್ಪ, ಜಿಲ್ಲಾಧ್ಯಕ್ಷರಾದ ಮೂಡಲು ಪುರ ನಂದೀಶ್, ಯುವ ಘಟಕದ ಅಧ್ಯಕ್ಷರಾದ ಚನ್ನಮಲ್ಲಿಪೂರ ಎಸ್ ಬಸವಣ್ಣ,ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯಿತ ಮುಖಂಡರುಗಳು ಪದಾಧಿಕಾರಿಗಳು ಯುವಕರು ಭಕ್ತಾದಿಗಳು ,ಬಸವಣ್ಣನವರ ಅನುಯಾಯಿಗಳು ಹಾಜರಿದ್ದರು.

ವರದಿ:ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

error: