December 22, 2024

Bhavana Tv

Its Your Channel

ಶಾಲಾ ಪ್ರಾರಂಭೋತ್ಸವ ದಿನದಂದು ಮಕ್ಕಳಲ್ಲಿ ಚೈತನ್ಯ ಮೂಡಿಸಿದ ಶಾಲಾ ಎಸ್ಡಿಎಂಸಿ ಸಮಿತಿ ಮತ್ತು ಬಿಇಓ ಸಿಬ್ಬಂದಿಗಳು

ಗುoಡ್ಲುಪೇಟೆ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ರಜೆ ಮುಗಿಸಿ ಶಾಲೆಪ್ರಾರಂಭ ಮಾಡುವ ಮೊದಲ ದಿನದಂದು ಎಸ್ಡಿಎಂಸಿ ಸಮಿತಿಯವರು ಮತ್ತು ಶಿಕ್ಷಕರುಗಳು ವಿವಿಧ ರೀತಿಯಲ್ಲಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು. ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಎತ್ತಿನ ಗಾಡಿಯಲ್ಲಿ ಕೂರಿಸಿ ಶಾಲೆಗೆ ಕರೆದುಕೊಂಡು ಮಕ್ಕಳಲ್ಲಿ ಚೈತನ್ಯ ಬರುವ ದಿಕ್ಕಿನಲ್ಲಿ ಹಮ್ಮಸ್ಸು ತುಂಬಿದರು.

ತಾಲೂಕಿನ ಹೋ0ಗಹಳ್ಳಿ, ಮುಖ ಹಳ್ಳಿ , ಮು0ಟೀಪುರ, ಮದ್ದೂರು ,ಜಿಹೆಚ್.ಪಿ.ಎಸ್ ಕುರುಬಗೇರಿ ,ಶೀಲಾವಂತಪುರ, ಕೊಡಸೋಗೆ ,ಇನ್ನೂ ಅನೇಕ ಶಾಲೆಗೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣ ಅಧಿಕಾರಿ ಶಿವಮೂರ್ತಿರವರು ಗುಲಾಬಿ ಹೂವು ನೀಡಿ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು.
ಈ ಶುಭ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಮೂರ್ತಿ ಹಾಗೂ ಗ್ರಾಮಸ್ಥರು ಎಸ್ಡಿಎಂಸಿ ಸಮಿತಿಯವರು ಶಿಕ್ಷಣ ಸಿಬ್ಬಂದಿಗಳು ಶಿಕ್ಷಕರು ವಿದ್ಯಾರ್ಥಿಗಳು ಹಾಜರಿದ್ದರು.

ವರದಿ: ಸದಾನಂದ ಕನ್ನೇಗಾಲ

error: