March 17, 2025

Bhavana Tv

Its Your Channel

ಭಟ್ಕಳದ ಆನಂದ ಆಶ್ರಮ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಪಾಲಕರ ಶಿಕ್ಷಕರ ಸಭೆ

ಭಟ್ಕಳ: ಆನಂದ ಆಶ್ರಮ ಪ್ರೌಢ ಶಾಲೆ ಭಟ್ಕಳ ಹಾಗೂ ಪದವಿಪೂರ್ವ ಕಾಲೇಜಿನ ಪಾಲಕರ ಶಿಕ್ಷಕರ ಸಭೆಯು ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಸಭೆಯನ್ನು ಅಸುರಲೈನ್ ಫ್ರಾನ್ಸಿಸ್ಕಾನ್ ಸಂಸ್ಥೆಯ ಸಂಚಾಲಕಿ ಲೂಸಿ ಡಿಸೋಜ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಿಸ್ಟರ್ ಲಿಲ್ಲಿ ಪುಷ್ಪ ಅವರು ಹದಿ ಹರೆಯದ ಮಕ್ಕಳ ಕುರಿತು ಪಾಲಕರು ವಹಿಸಬೇಕಾದ ಜಾಗೃತೆ. ಮಕ್ಕಳು ಶಾಲೆ ಅಥವಾ ಕಾಲೇಜಿನಿಂದ ಬಂದಾಗ ಅವರೊಂದಿಗೆ ಪಾಲಕರು ನಡೆದುಕೊಳ್ಳಬೇಕಾದ ರೀತಿ. ಮಕ್ಕಳ ನಡವಳಿಕೆಯನ್ನು ಗಮನಿಸುವುದರೊಂದಿಗೆ ಅವರ ಗೆಳೆಯರನ್ನು ಅರಿಯುವುದರ ಪ್ರಾಮುಖ್ಯತೆಯನ್ನು ಸಹ ತಿಳಿಸುತ್ತಾ ಅನೇಕ ಉದಾಹರಣೆಗಳನ್ನು ನೀಡಿ ಮಕ್ಕಳು ಹದಿ ಹರೆಯದಲ್ಲಿ ದುಶ್ಚಟಕ್ಕೆ ಬಲಿಯಾಗಬಹುದಾದ ಸಾಧ್ಯತೆಗಳನ್ನು ಸಹ ಉದಾಹರಣೆ ಸಹಿತವಾಗಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಕಳೆದ 9 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಸಿಸ್ಟರ್ ಥೆರೆಸಿಯಾ ಸೆರಾ, ಕಳೆದ 6 ವರ್ಷಗಳ ಕಾಲ ಪಾಲಕ-ಶಿಕ್ಷಕ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ರಾಧಾಕೃಷ್ಣ ಭಟ್ಟ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶಾಲೆಗೆ ಪ್ರಥಮ ಬಂದ ಹಾಗೂ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ನೂತನ ಪಾಲಕ-ಶಿಕ್ಷಕ ಸಮಿತಿಯ ಉಪಾಧ್ಯಕ್ಷರಾದ ಗಂಗಾಧರ ನಾಯ್ಕ ಮಾತನಾಡಿ ಪಾಲಕರು ತಮ್ಮ ಮಕ್ಕಳ ಕುರಿತು ಕಾಳಜಿ ವಹಿಸಬೇಕಾಗಿರುವ ಕುರಿತು ವಿವರಿಸಿದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಸಿಸ್ಟರ್ ಟ್ರೆಸಿಲ್ಲಾ ಉಪಸ್ಥಿತರಿದ್ದರು.
ನೂತನ ಪ್ರಾಂಶುಪಾಲೆ ಸಿಸ್ಟರ್ ವಿನುತಾ ಡಿಸೋಜ ಸ್ವಾಗತಿಸಿ, ಪಾಲಕರು ಪಾಲಿಸಬೇಕಾದ ಕೆಲವೊಂದು ನಿಯಮಗಳನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ವಿದ್ಯಾರ್ಥಿಗಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹಿರಿಯ ಉಪನ್ಯಾಸಕ ಪೆಟ್ರಿಕ್ ಟೆಲ್ಲಿಸ್ ವಂದಿಸಿದರು.

error: