April 17, 2025

Bhavana Tv

Its Your Channel

ಚಾಮುಲ್ ವಿಜಯಮಾಲೆ ವಜ್ರಕ್ಕೆ ಮಣಿಯುವುದೇ

ಗುಂಡ್ಲುಪೇಟೆಯ ಮೂಲ ಬಿಜೆಪಿಯ ಕಟ್ಟಾಳು ಎಂದೆ ಈ ಭಾಗದಲ್ಲಿ ಆಗಿನ ಕಾಲದಲ್ಲಿ ಗುರುತಿಸಿಕೊಂಡ ದಿವಂಗತ ಎಂ. ಪಿ . ವೃಷಭೇಂದ್ರಪ್ಪ ಮುಡುಗೂರು ಗೌಡ ರ ಮನೆತನದವರಾಗಿದ್ದು . ಅವರ ಸಹೋದರ ಎಂ .ಪಿ . ಪ್ರಸಾದ್ ರವರ ಸುಪುತ್ರರಾದ ಎಂ .ಪಿ ಸುನಿಲ್ ರವರು ಅದೇ ಮನೆತನದ ಯುವನಾಯಕ ಮೂಲ ಬಿಜೆಪಿಗರಾಗಿದ್ದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಚಾಮುಲ್ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಇವರ ಸೇವೆ ಎಂ. ಡಿ.ಸಿ.ಸಿ .ಬ್ಯಾಂಕಿನ ನಿರ್ದೇಶಕರಾಗಿ 2004 ರಿಂದ ಸುಮಾರು 36 ಪಿ.ಎ.ಸಿ.ಸಿ. ಬ್ಯಾಂಕುಗಳಿಗೆ ನೂರು ಕೋಟಿಗೂ ಅಧಿಕ ಸಾಲವನ್ನು ಕೊಡಿಸುವಲ್ಲಿ ಕಾರಣೀಭೂತರಾಗಿದ್ದಾರೆ. ಹಾಗಾಗಿ ಚಾಮುಲ್ ತೇರನ್ನು ಎಳೆಯಲು ನಿಮ್ಮ ಅಮೂಲ್ಯವಾದ ಮತವನ್ನು ವಜ್ರದ ಗುರುತಿಗೆ ನೀಡುವಂತೆ ಈ ಮೂಲಕ ಕೇಳಿಕೊಳ್ಳುತ್ತೇನೆ. ಎಂದು ಎಂಪಿ ಸುನೀಲ್ ರವರು ಮಾಧ್ಯಮದವರ ಮೂಲಕ ರೈತರಿಗೆ ತಿಳಿಸಿದ್ದಾರೆ.

ವರದಿ: ಸದಾನಂದ ಕನ್ನೇಗಾಲ

error: