

ಭಟ್ಕಳ: ಭಾರತೀಯ ಸ್ಟೇಟ್ ಬ್ಯಾಂಕ್ ಆಪ್ ಬಾಜಾರ ಶಾಖೆಯ ಸಸ್ಪೆನ್ಸ್ ಸಿಸ್ಟಮ್ ಖಾತೆಯಿಂದ ಕೋಟ್ಯಾಂತರ ರೂಪಾಯಿ ಹಣ ಲಪಟಾಯಿಸಿರುವ ಪ್ರಕರಣಕ್ಕೆ ಸಂಬoಧಿಸಿದoತೆ ತಲೆ ಮರೆಸಿಕೊಂಡಿರುವ ಅಂದಿನ ಶಾಖಾ ವ್ಯವಸ್ಥಾಪಕ ಅನೂಪ್ ಪೈ ಬಗ್ಗೆ ಮಾಹಿತಿ ನೀಡುವಂತೆ ಪೊಲೀಸರು ಹೊರಡಿಸಿದ್ದಾರೆ. ಪ್ರಕಟಣೆ
ಬ್ಯಾಂಕಿನ ಸಸ್ಪೆನ್ಸ್ ಸಿಸ್ಟಮ್ ಖಾತೆಯ ಪಾಸ್‌ವರ್ಡ ವ್ಯವಸ್ಥಾ ಪಕರಿಗೆ ಮಾತ್ರ ನೀಡಲಾಗುತ್ತಿದ್ದು,
ಅಲ್ಲಿಂದ ಭಾರೀ ಮೊತ್ತದ ಹಣವನ್ನು ಖಾಸಗಿ ಖಾತೆಗೆ ವರ್ಗಾಯಿಸಿರುವುದು. ಕಳೆದ ಮಾರ್ಚ ತಿಂಗಳ ಲೆಕ್ಕಪರಿಶೋ ಧನಾ ವರದಿಯಲ್ಲಿ ತಿಳಿಸಲಾಗಿತ್ತು.

ಆರೋಪಿಯು 2019ರಿಂದಲೇ ನಿಯಮಬಾಹೀರವಾಗಿ ಈ ಸಸ್ಪೆನ್ಸ್ ಖಾತೆಯಿಂದ ಭಾರೀ ಮೊತ್ತದ ಹಣವನ್ನು ಖಾಸಗಿ ಖಾತೆಗೆ ವರ್ಗಾಯಿಸುತ್ತ ಬಂದಿದ್ದ ಬಗ್ಗೆ ಆರೋಪಿಸಲಾಗಿದ್ದು, ಈ ಲಗ್ಗೆ ದೂರು ದಾಖಲಾಗುತ್ತಿದ್ದಂತೆಯೇ ಆರೋಪಿಯು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ. ಇದೀಗ ಪೊಲೀಸರು ಆತನ ಬಗ್ಗೆ ಮಾಹಿತಿ ಇದ್ದಲ್ಲಿ ಸಮೀಪದ ಪೊಲೀಸ ಠಾಣೆಯನ್ನು ಸಂಪರ್ಕಿಸುವoತೆ ಪ್ರಕಟಣೆ ಹೊರಡಿಸಿದ್ದಾರೆ.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ