ಗುಂಡ್ಲುಪೇಟೆ ಪಟ್ಟಣದ ಸೋಮೇಶ್ವರ ವಿದ್ಯಾರ್ಥಿನಿಲಯ ಪಕ್ಕದಲ್ಲಿರುವ ನೂತನವಾಗಿ ನಿರ್ಮಾಣವಾದ ಕುಂಬಾರರ ಸಮುದಾಯ ಭವನವನ್ನು ಕ್ಷೇತ್ರದ ಶಾಸಕರಾದ ಸಿ..ಎಸ್. ನಿರಂಜನ್ ಕುಮಾರ್ ಅವರು ದೀಪ ಬೆಳಗುವ ಮುಖಾಂತರ ಉದ್ಘಾಟನೆಯನ್ನು ನೆರವೇರಿಸಿದರು. ನಂತರ ಮಾತನಾಡಿ ನಮ್ಮ ಸರ್ಕಾರದ ಅವಧಿಯಲ್ಲಿ ಕುಂಬಾರರ ಸಮಾಜವನ್ನು ಗುರುತಿಸಿ ಅವರಿಗೆ ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಕುಂಬಾರರ ಸರ್ವತೋಮುಖ ಅಭಿವೃದ್ಧಿಗೆ ಅಂದಿನ ಕಾಲದಲ್ಲಿ ಶ್ರಮಿಸಿದ್ದಾರೆ ಅಲ್ಲದೆ ನಾವು ಕೂಡ ಈಗ ಪುರಸಭೆ ನಾಮ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದೇವೆ. ಅಲ್ಲದೆ ಇನ್ನು ಮುಂದೆ ಕುಂಬಾರರ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ನAತರ ರಾಜ್ಯ ಕುಂಬಾರರ ಸಂಘದ ಅಧ್ಯಕ್ಷರಾದ ಶಿವಕುಮಾರ್ ಚೌಡ ಶೆಟ್ಟಿ ಮಾತನಾಡಿ ನಮ್ಮ ತೆರಕಣಾಂಬಿ ಸಿದ್ಧ ಶೆಟ್ಟಿಯವರನ್ನು ಇಂದು ನಾವು ಸ್ಮರಿಸಬೇಕಾಗಿದೆ. ಏಕೆಂದರೆ ೧೯೭೨- ೭೩ ರ ಅವಧಿಯಲ್ಲಿ ಇಡೀ ರಾಜ್ಯದ ಕುಂಬಾರರ ಸಂಘಟನೆಯನ್ನು ಮಾಡಬೇಕು ಎಂದು ಮುಂದಾಳತ್ವವನ್ನು ವಯಸ್ಸಿ ಮೈಸೂರಿನಲ್ಲಿ ಒಂದು ನಿವೇಶನವನ್ನು ಪಡೆದು ಸಾರ್ವಜನಿಕರ ವಿದ್ಯಾರ್ಥಿನಿಲಯವನ್ನು ಅವರ ಪರಿಶ್ರಮದಿಂದ ಬಡ ವಿದ್ಯಾರ್ಥಿಗಳಿಗೆ ಕಟ್ಟಿದ್ದಾರೆ ಅಲ್ಲದೆ ನಮ್ಮ ಸಮಾಜದ ಬಂಧುಗಳು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಮತ್ತು ಸಮಾಜದ ಮುಖ್ಯವಾಹಿನಿಗೆ ತರಬೇಕು ಮಕ್ಕಳನ್ನು ಎಂದರು.
ಇದೇ ಸಂದರ್ಭದಲ್ಲಿಕುAಬಾರ ಸಮಾಜದ ಪಂಚಾಯಿತಿಯ ಸದಸ್ಯರುಗಳಿಗೆಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿದ್ದಾರೆ
ಈ ಸಂದರ್ಭದಲ್ಲಿ ಕುಂಬಾರರ ಸಂಘದ ರಾಜ್ಯ ಅಧ್ಯಕ್ಷರಾದ ಶಿವಕುಮಾರ ಚೌಡಶೆಟ್ಟಿ, ನೇಪಾಳ ರಾಜ್ಯದ ರಾಜ್ಯಪಾಲರ ಸಲಹೆಗಾರರಾದ ಡಾ. ವರ್ಷ, ಜಿಲ್ಲಾ ಅಧ್ಯಕ್ಷರಾದ ರಾಜೇಂದ್ರ, ಟಿ.ಎಸ್ ಸಂಪತ್ತು, ತಾಲೂಕು ಅಧ್ಯಕ್ಷರಾದ ವೆಂಕಟರಾಜು . ಮಾಜಿ ಕಾಡಾ ಅಧ್ಯಕ್ಷರಾದ ಎಚ್ ಎಸ್ ನಂಜಪ್ಪ, ಚಾಮುಲ್ ನಿರ್ದೇಶಕರಾದ ಎಚ್ ಎಸ್ ನಂಜುAಡ ಪ್ರಸಾದ್, ಹನುಮಂತ ಶೆಟ್ಟಿ ಉಪಾಧ್ಯಕ್ಷರು, ಕೊ೦ಗಳ ಶೆಟ್ಟರು, ಪ್ರಧಾನ ಕಾರ್ಯದರ್ಶಿಗಳಾದ. ಹನುಮಂತ ಶೆಟ್ಟರು, ಹಾಗೂ ತಾಲೂಕು ಕುಂಬಾರರ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕುಂಬಾರರ ಯುವಕರ ಸಂಘ, ಹಾಗೂ ಎಲ್ಲಾ ತಾಲೂಕಿನ ಮುಖಂಡರುಗಳು ಯುವಕರು ಮಹಿಳೆಯರು ಹಾಜರಿದ್ದರು.
ವರದಿ: ಸದಾನಂದ ಕನ್ನೇಗಾಲ
.
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.