December 20, 2024

Bhavana Tv

Its Your Channel

ಗುಂಡ್ಲುಪೇಟೆ ಪಟ್ಟಣದಲ್ಲಿ ಬಹಳ ವಿಜೃಂಭಣೆಯಿoದ ನಡೆದ ಭಗೀರಥ ಜಯಂತಿ

ಗುಂಡ್ಲುಪೇಟೆ ತಾಲೂಕಿನಲ್ಲಿ ಉಪ್ಪಾರ ಸಮುದಾಯ ಶಕ್ತಿ ಪ್ರದರ್ಶನ ಮಾಡುವ ಉದ್ದೇಶದಿಂದ ಇಂದು ತಾಲೂಕು ಭಗೀರಥ ಜಯಂತಿ ಸಮಿತಿ, ತಾಲೂಕು ಭಗೀರಥ ಉಪ್ಪಾರ ಸಂಘ, ಗಡಿ ಕಟ್ಟೆ, ಗುರುಮನೆ, ಉಪ್ಪಾರ ಜನ ಜಾಗೃತಿ ಯುವ ವೇದಿಕೆ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮದ ಉಪ್ಪಾರ ಸಂಘಗಳ ಸಹಕಾರದೊಂದಿದೆ ಭಗೀರಥ ಜಯಂತಿಯನ್ನು ಆಯೋಜನೆ ಮಾಡಲಾಗಿತ್ತು ,
ಕಾರ್ಯಕ್ರಮ ಉದ್ದೇಶಿಸಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ ಹಿಂದುಳಿದ ವರ್ಗಕ್ಕೆ ಸೇರಿದ ಉಪ್ಪಾರ ಜನಾಂಗದವರಲ್ಲಿ ಅನಕ್ಷರಸ್ಥರ ಪ್ರಮಾಣ ಹೆಚ್ಚಾಗಿದ್ದು ಅದಕಾರಣ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಾಗ ಮಾತ್ರ ಜನಾಂಗದವರಲ್ಲಿ ಬದಲಾವಣೆ ಕಾಣಲು ಸಾದ್ಯ ಎಂದು ಹೇಳಿದರು ..

ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಹೆಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ ಉಪ್ಪಾರ ಜನಾಂಗದವರು ಸಂಘಟನೆ ಶಿಕ್ಷಣಕ್ಕೆ ಒತ್ತು ನೀಡಿದಾಗ ಮಾತ್ರ ಅರ್ಥಿಕ ವಾಗಿ , ರಾಜಕೀಯ ವಾಗಿ ಅಧಿಕಾರ ಪಡೆಯಲು ಸಾದ್ಯ ಹೇಳಿದ ಗಣೇಶ್ ಪ್ರಸಾದ್ ಕಳೆದ ಸಾಲಿನಲ್ಲಿ ನಮ್ಮ ತಂದೆ ಮಾಜಿ ಸಚಿವರಾದ ದಿ.ಮಹದೇವ ಪ್ರಸಾದ್ ರವರ ಆಡಳಿತ ಅವಧಿಯಲ್ಲಿ ಉಪ್ಪಾರ ಜನಾಂಗದವರ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸಿದ್ದರು , ನಾವು ಕೂಡ
ಮುಂದೆಯೂ ನಿಮ್ಮ ಸಹಕಾರಕ್ಕೆ ಸಿದ್ದರಿದ್ದೇವೆ ಎಂದು ತಿಳಿಸಿದರು ,
ಕಾರ್ಯಕ್ರಮ ಉದ್ದೇಶಿಸಿ ಉಪ್ಪಾರ ಜನಾಂಗದ ಅಧ್ಯಕ್ಷ ರಾದ ಎಂ.ಪುಟ್ಟರAಗ ಶೆಟ್ಟರು ಮಾತನಾಡಿ ಜನಾಂಗದವರು ಮೊದಲು ದುಶ್ಚಟಗಳಿಂದ ದೂರು ಇದ್ದು , ತಮ್ಮ ಮಕ್ಕಳಿಗೆ ಬಾಲ್ಯ ವಿವಾಹ ಮಾಡದೇ ಗುಣಮಟ್ಟದ ಶಿಕ್ಷಣ ಕೊಡಿಸಿದರೇ ಮಾತ್ರ ನಮ್ಮ ಜನಾಂಗದವರು ಅರ್ಥಿಕ ವಾಗಿ , ರಾಜಕೀಯ ವಾಗಿ ಮುಂದೆ ಬರಲು ಸಾದ್ಯವಾಗಲಿದೆ ಎಂದು ಕಿವಿಮಾತು ಹೇಳಿದರು ,
ಕಾರ್ಯಕ್ರಮ ದಲ್ಲಿ ಹೊಸದುರ್ಗ ಭಗೀರಥ ಮಠದ ಪೀಠಾಧ್ಯಕ್ಷರಾದ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿ ಹಾಗೂ ಸರಗೂರು ಅಯ್ಯನ ಮಠರ ಮಹದೇವಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು ,
ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಗಣೇಶಪ್ರಸಾದ್, ರಾಜ್ಯ ಉಪ್ಪಾರ ಯುವಕರ ಸಂಘದ ಉಪಾಧ್ಯಕ್ಷ ರಾಮಚಂದ್ರ ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಶಿವುಶಂಕರ್, ಮುಖಂಡರಾದ ರಾಮಚಂದ್ರು .
ಹಾಪ್ ಕಾಮ್ಸ್ ತಾಲೂಕು ಮಲೀಶೆಟ್ಟಿ, ಕೋಡಹಳ್ಳಿ ಪಟೇಲ್ ನಾಗಶೆಟ್ಟಿ, ಎಪಿಎಂಸಿ ನಿರ್ದೇಶಕ ಭೀಮನಬೀಡು ಅರಸಶೆಟ್ಟಿ, ಕೂತನೂರು ಗ್ರಾಪಂ ಮಾಜಿ ಉಪಾಧ್ಯಕ್ಷ ವಿ.ಗೋಪಾಲ್, ಗಡಿ ಯಜಮಾನರಾದ ಶಿವಯ್ಯಶೆಟ್ಟಿ, ಬನ್ನೀತಾಳಪುರ ಮಹೇಶ, ಸುರೇಶ್ ಇತರರು ಹಾಜರಿದ್ದರು.
ವರದಿ: ಸದಾನಂದ ಕನ್ನೇಗಾಲ

error: