December 21, 2024

Bhavana Tv

Its Your Channel

ಸಚಿವ ಸೋಮಣ್ಣನವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಯಿಂದ ನೆರವು

ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದ ಶಿವಮೂರ್ತಿ ಹಾಗೂ ಪವಿತ್ರ ದಂಪತಿಗಳ ಪುತ್ರಿ ಚಾರ್ವಿ ೭ ವರ್ಷದ ಬಾಲಕಿಗೆ ಲಿವರ್ ಸಮಸ್ಯೆ ಇದ್ದು ಬದಲಿ ಲಿವರ್ ಜೋಡನೆಗೆ ೨೬ ಲಕ್ಷ ವೆಚ್ಚವಾಗಲಿದ್ದು ಅಷ್ಟು ವೆಚ್ಚ ಭರಿಸಲಾಗದೆ ಅಪೋಲೋ ಅಸ್ಪತ್ರೆಯಿಂದ ಇದುವರೆಗು ವೆಚ್ಚವಾಗಿದ್ದ ನಾಲ್ಕೈದು ಲಕ್ಷ ಬಿಲ್ ಕಟ್ಟಿ, ಡಿಸ್ಚಾರ್ಜ್ ಮಾಡಿಸಿಕೊಂಡು ಆಯುರ್ವೇದ ಚಿಕಿತ್ಸೆ ನೀಡಲು ಸ್ವಗ್ರಾಮಕ್ಕೆ ಹಿಂದಿರುಗಿದ್ದರು.

ಪ್ರತಿನಿತ್ಯ ಆಯುರ್ವೇದಿಕ್ ಚಿಕಿತ್ಸೆ ಕೊಡಿಸುತ್ತ ದೇವರ ಮೇಲೆ ಬಾರ ಹಾಕಿ, ಇರುವ ಒಬ್ಬ ಪುಟ್ಟ ಕಂದನನ್ನು ಉಳಿಸಿಕೊಳ್ಳಲು ಪರದಾಡುತ್ತಿರುವ ಕುಟುಂಬಕ್ಕೆ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಅಭಿಮಾನಿ ಮಾಡ್ರಹಳ್ಳಿ ನಾಗೇಂದ್ರ ಮತ್ತು ಅವರ ಸ್ನೇಹಿತರು ಜೊತೆಗೂಡಿ ಬಾಲಕಿ ಚಾರ್ವಿಯ ಚಿಕಿತ್ಸೆಗೆ ಕೈಲಾದ ಆರ್ಥಿಕ ನೆರವು ನೀಡಿದರು. ಉಸ್ತುವಾರಿ ಸಚಿವರ ಬಳಿ ಮಾತನಾಡಿ ಚಿಕಿತ್ಸೆಗೆ ಹೆಚ್ಚಿನ ನೆರವು ಕೊಡಿಸುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ವಿ, ಸೋಮಣ್ಣ ಅಭಿಮಾನಿಗಳು ಹಾಗೂ ಬಿಜೆಪಿ ಮುಖಂಡರಾದ ಮಾಡ್ರಹಳ್ಳಿ ಮಲ್ಲೇಶ್, ಮಹದೇವಪ್ರಸಾದ್, ನಂದೀಶ್ ಹಂಗಳ, ಸಾಂತಪ್ಪ ಮಹದೇವಪ್ಪ, ಆನಂದ ಶಿವಮೂರ್ತಿ, ಮಳವಳ್ಳಿ ಮಹೇಶ್, ಶಿಂಡನಪುರ ಮಂಜು, ಮತ್ತಿತರರಿದ್ದರು.

ವರದಿ:ಸದಾನಂದ ಕಣ್ಣೆಗಾಲ

error: