December 22, 2024

Bhavana Tv

Its Your Channel

ಜಿಎಸ್‌ಟಿ ತೆರಿಗೆಯನ್ನು ವಿರೋಧಿಸಿ ಕರ್ನಾಟಕ ಕಾವಲು ಪಡೆ ಸಂಘಟನೆ ವತಿಯಿಂದ ತಾಲೂಕು ದಂಡಾಧಿಕಾರಿಗೆ ಮನವಿ.

ಗುಂಡ್ಲುಪೇಟೆ :-ಕೇಂದ್ರ ಸರ್ಕಾರವು ದಿನಬಳಕೆ ದಿನಸಿ ಪದಾರ್ಥಗಳ ಮೇಲೆ ಏರಿರುವ ಜಿಎಸ್‌ಟಿ ತೆರಿಗೆಯನ್ನು ಹಿ೦ಪಡೆಯಬೇಕೆಂದು ಕರ್ನಾಟಕ ಕಾವಲು ಪಡೆ ಸಂಘಟನೆ ವತಿಯಿ೦ದ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ತಾಲೂಕು ಕಾವಲು ಪಡೆಯ ತಾ.ಅಧ್ಯಕ್ಷರಾದ ಅಬ್ದುಲ್ ಮಾಲಿಕ್ ಮಾತನಾಡಿ ಕೇಂದ್ರ ಸರ್ಕಾರವು ವಿಧಿಸಿರುವ ಜಿಎಸ್‌ಟಿಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿದೆ ಇದರ ಬಗ್ಗೆ ಕ್ರಮ ವಹಿಸಿ ವಿಧಿಸಿರುವ ಜಿಎಸ್‌ಟಿ ತೆರಿಗೆಯನ್ನು ಕೂಡಲೇ ಹಿಂಪಡೆಯಬೇಕೆAದು ಒತ್ತಾಯಿಸಿ ಸರ್ಕಾರಕ್ಕೆ ಈ ಮೂಲಕ ಮುನ್ನೆಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ಗೌರವಾಧ್ಯಕ್ಷರಾದ ವೆಂಕಟೇಶ್ ಗೌಡ್ರು, ಕಾರ್ಯದರ್ಶಿಗಳಾದ ಮುಬಾರಕ್, ಜಿಲ್ಲಾ ಉಪಾಧ್ಯಕ್ಷರಾದ ಅಮೀರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಅಬ್ದುಲ್ ರಶೀದ್, ತಾ. ಕಾರ್ಯಧ್ಯಕ್ಷರಾದ ಇಲಿಯಸ್, ಸಾದಿಕ್ ಪಾಶ, ಶಕೀಲ್, ಮಿಟಾಯಿ ಮಂಜು , ಎಚ್ ರಾಜು, ಮಿಮಿಕ್ರಿ ರಾಜು, ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ಸದಾನ೦ದ ಕಣ್ಣೆಗಾಲ

error: