December 20, 2024

Bhavana Tv

Its Your Channel

ಸಂಸ್ಕೃತಿ ಮತ್ತು ಸಂಸ್ಕಾರವನ್ನು ಮಕ್ಕಳಿಗೆ ಪೋಷಕರು ಕಲಿಸಬೇಕು- ಖ್ಯಾತ ವಾಗ್ಮಿಗಳಾದ ಹಿರೇಮಗಳೂರು ಕಣ್ಣನ್

ಗುಂಡ್ಲುಪೇಟೆ ಪಟ್ಟಣದ ಸಿಎಂಎಸ್ ಕಲಾಮಂದಿರದಲ್ಲಿ ನಡೆದ ಕೌ೦ಡಿನ್ಯ ವಿಪ್ರ ಬಳಗ ಹಾಗೂ ಶಾರದಾ ತತ್ಸಂಗ ಸಹಭಾಗಿತ್ವದಲ್ಲಿ ನಡೆದ ಆಚಾರ್ಯ ತ್ರಯರ ಜಯಂತಿ ಮತ್ತು ವಿಪ್ರ ಸಮಾವೇಶ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಹಿರೇಮಗಳೂರು ಕಣ್ಣನ್ ಈಗಿನ ಕಾಲದ ಮಕ್ಕಳಿಗೆ ಪೋಷಕರು ಸಂಸ್ಕೃತಿ ಮತ್ತು ಸಂಸ್ಕಾರವನ್ನು ಕಲಿಸಬೇಕು. ಆಗಿದ್ದಲ್ಲಿ ಮಾತ್ರ ಸಮಾಜಕ್ಕೆ ಮತ್ತು ದೇಶಕ್ಕೆ ಕೊಡುಗೆಯನ್ನು ನೀಡಿದಂತಾಗುತ್ತದೆ. ಎಂದರು

ಇದೇ ಸಂದರ್ಭದಲ್ಲಿ ತಾಲೂಕು ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವನ್ನು ನೀಡಲಾಯಿತು.
ಹಾಗೂ ತಾಲೂಕಿನಲ್ಲಿರುವ ಬ್ರಾಹ್ಮಣ ಸಮಾಜದ ಐವತ್ತು ವರ್ಷ ದಾಂಪತ್ಯ ಜೀವನವನ್ನು ಪೂರೈಸಿದ ಹಿರಿಯ ದಂಪತಿ ೨೫ ಜೋಡಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ .ಶೈಲ ಕುಮಾರ್ ರವರು ವಾಗ್ಮಿಗಳಾದ ಹಿರೇಮಗಳೂರು ಕಣ್ಣನ್ ರವರಿಗೆ ಪುಸ್ತಕವನ್ನು ನೀಡಿ ಶಾಲು ಹೊದಿಸಿ ಗೌರವಿಸಿದರು.ಅಲ್ಲದೆ ಈ ಸಮಾಜದ ಯುವಕರುಗಳಿಗೆ ಆಯಾಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಬ್ರಾಹ್ಮಣ ಅಧ್ಯಕ್ಷರಾದ ಜಿ.ಎಂ.ಹೆಗಡೆ, ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಶ್ರೀಹಿಮವದ್ ಗೋಪಾಲಸ್ವಾಮಿ, ಬೆಟ್ಟದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ಭಟ್ಟರು, ಪುರಸಭೆ ಅಧ್ಯಕ್ಷರಾದ ಪಿ. ಗಿರೀಶ್ ,ಉಪಾಧ್ಯಕ್ಷರಾದ ದೀಪಿಕಾ ಅಶ್ವಿನ್, ರಾಯರ ಮಠದ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಚಂದ್ರಶೇಖರ್, ನಿರೂಪಕರಾದ ಬಾಲಸುಬ್ರಹ್ಮಣ್ಯಂ, ರಾಜಣ್ಣ, ನಾಗರಾಜ ಶರ್ಮ, ರಾಜೇಶ್ ಭಟ್ಟ, ಮಂಜುನಾಥ್ ಸುರಭಿ ಹೋಟೆಲ್ ಮಾಲೀಕರು, ಹಾಗೂ ಬ್ರಾಹ್ಮಣ ಸಮಾಜದ ಎಲ್ಲಾ ಸಂಘ-ಸAಸ್ಥೆಯ ಮಹಿಳೆಯರು ,ಪುರುಷರು, ಶಿಕ್ಷಕರುಗಳು ,ಶಿಕ್ಷಕಿಯರು ಯುವಕರು, ಯುವತಿಯರು, ಉಪಸ್ಥರಿದ್ದರು.

ವರದಿ: ಸದಾನ೦ದ ಕಣ್ಣೆಗಾಲ

error: