December 22, 2024

Bhavana Tv

Its Your Channel

ನಿವೃತ್ತ ಉಪನ್ಯಾಸಕರಾದ ಕೆಎನ್ ನಂಜುoಡಯ್ಯನವರಿಗೆ ಹಳೇ ವಿದ್ಯಾರ್ಥಿಗಳಿಂದ ಸನ್ಮಾನ

ಗುಂಡ್ಲುಪೇಟೆ ಪಟ್ಟಣದ ಗುರುಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೂಜ್ಯ ಗುರುಗಳಾದ ಕೆ.ಎನ್. ನಂಜುoಡಯ್ಯನವರಿಗೆ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಜೆ .ಓ. ಸಿ. ಹಳೆಯ ವಿದ್ಯಾರ್ಥಿಗಳಿಂದ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ನಂತರ ವಿದ್ಯಾರ್ಥಿಗಳು ಪೂಜ್ಯ ಗುರುಗಳಿಗೆ ಮೈಸೂರು ಪೇಟೆ ಹಾಕಿ ಶಾಲು ಹೊದಿಸಿ ಸನ್ಮಾನಿಸಿದರು. ನಂತರ ವಿದ್ಯಾರ್ಥಿಗಳು ಪೂಜ್ಯ ಗುರುಗಳ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳಾದ ಮಹಾದೇವಸ್ವಾಮಿ ಸತೀಶ್, ಮಮತಾ, ರಾಜೇಶ್ವರಿ ಗೀತಾ, ಮಹೇಶ್ವರಿ, ವಿನಯ್, ಕಬ್ಬಳ್ಳಿ ಕುಮಾರ್ , ಸುಕೇಶ್, ಸ್ವಾಮಿ ನಾಗಪ್ಪ ,ಅಶೋಕ್, ಚೌಡಹಳ್ಳಿ ನಂದೀಶ್, ಸುಕೇಶ್ ಗೌಡ, ಹಾಗೂ ಇನ್ನು ಮುಂತಾದ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವರದಿ: ಸದಾನಂದ ಕನ್ನೇಗಾಲ

error: