December 22, 2024

Bhavana Tv

Its Your Channel

ವೈದ್ಯರಿಲ್ಲದೆ ರೋಗಿ ಸಾವು ಸಾರ್ವಜನಿಕರಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ, ನಾಗೇಶ (೩೬) ಎಂಬ ವ್ಯಕ್ತಿ ಎದೆನೋವು ಎಂದು ತೆರಕಣಾಂಬಿ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ, ತೆರಕಣಾಂಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿ ಸಾವನಪ್ಪಿದ್ದಾನೆ, ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ರೆ ಬದುಕುಳಿಯುತ್ತಿದ್ದ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದರೆ, ೧೦೮ ಅಂಬುಲೆನ್ಸ್ ವಾಹನ ಚಾಲಕರಿಲ್ಲದೆ ನಿಂತಿದ್ದು ಇದ್ರೂ ಉಪಯೋಕ್ಕೆ ಬಾರದ ರೀತಿಯಲ್ಲಿದೆ, ಅಲ್ಲದೇ ಆಸ್ಪತ್ರೆ ಸರಿಯಾದ ವೈದ್ಯರ ನೇಮಕ ಮಾಡಿಲ್ಲ, ಖಾಯಂ ನೌಕರರು ಸಹ ಇಲ್ಲದೇ ಸಾರ್ವಜನಿಕರೂ ಕಷ್ಟ ಅನುಭವಿಸುತ್ತಿದ್ದಾರೆ.
ಆಸ್ಪತ್ರೆ ಮುಂದೆ ಮೃತ ನಾಗೇಶ್ ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದರು, ಇವರಿಗೆ ಸಾರ್ವಜನಿಕರು ಸಾಥ ನೀಡಿ ಸರ್ಕಾರದ ವಿರುದ್ದ ಘೋಷಣೆ ಕೂಗಿ ಬೃಹತ್ ರಸ್ತೆ ತಡೆ ನಡೆಸಿದರು. ಕೂಡಲೆ ಖಾಯಂ ವೈದ್ಯರನ್ನು ನೇಮಿಸುವಂತೆ ಪ್ರತಿಭಟನಾಕಾರರ ಒತ್ತಾಯಿಸಿದರು

ವರದಿ:- ಸದಾನಂದ ಕನ್ನೇಗಾಲ, ಗುಂಡ್ಲಪೇಟೆ

error: