December 20, 2024

Bhavana Tv

Its Your Channel

ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ

ಗುಂಡ್ಲುಪೇಟೆ ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿ ಇರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಸನ್ನಿದಾನದಲ್ಲಿ 351 ನೇ ಆರಾಧನಾ ಮಹೋತ್ಸವ ವನ್ನು 12.13.14. ರಂದು ಎರ್ಪಡಿಸಲಾಗಿದೆ. ಮೂರು ದಿನ ಬೆಳಗ್ಗೆ 6 ಗಂಟೆಗೆ ವಿಶೇಷ ಪೂಜೆ . ಹೋಮ ಎರ್ಪಡಿಸಲಾಗಿದೆ.

12 ರ ಬೆಳಗ್ಗೆ 6 ಗಂಟೆಗೆ ಗಣಪತಿ ಪೂಜೆ. ಸ್ವಸ್ತಿ ಪುಣ್ಯಾಹ. ಕಳಸ ಸ್ಥಾಪನೆ. ಗಣಪತಿ ಹೋಮ . ಶ್ರೀರಾಮ ತಾರಕ ಹೋಮ. 10 .30 ಅಲಂಕಾರ ಕಾರ ಬ್ರಾಹ್ಮಣ ಸೇವಾ. 11.30 ಕ್ಕೆ ಮಹಾ ಮಂಗಳಾರತಿ ನಡೆಯಲಿದೆ .
13 ರಂದು ಬೆಳಗ್ಗೆ 7 ಗಂಟೆಗೆ ಪವಮಾನ ಹೋಮ , 10.30 ಕ್ಕೆ ಅಲಂಕಾರ ಬ್ರಾಹ್ಮಣ ಸೇವಾ. ಮಧ್ಯಾಹ್ನ 11 ಕ್ಕೆ ಮಹಾ ಮಂಗಳಾರತಿ ನಡೆಯಲಿದೆ

:ಸಾಂಸ್ಕೃತಿಕ ಕಾರ್ಯಕ್ರಮ
ಸಿದ್ದನಗೌಡ ಪಾಟೀಲ್ ರವರಿಂದ ಭಕ್ತಿಗಾನಸುಧೆ, ದಾಸನಮನ, ಭಕ್ತಿಗೀತೆ ಗಳ ಗಾಯನ, ಸಾಯಂಕಾಲ 6.30 ಕ್ಕೆ ರಥೋತ್ಸವ .ಉಯ್ಯಾಲೆ ಸೇವೆ. ಸ್ವಸ್ಥಿವಾಚನ ಮಹಾಮಂಗಳಾರತಿ ನಡೆಯಲಿದೆ .
14 ರಂದು ಭಾನುವಾರ ಬೆಳಗ್ಗೆ ಉತ್ತಾರಾಧನೆ . ಬೆಳಗ್ಗೆ 7 ಕ್ಕೆ ಸುದರ್ಶನ ಹೋಮ ಹಾಗೂ ಶ್ರೀ ರಾಘವೇಂದ್ರ ಅಕ್ಷರ ಹೋಮ, ಬೆಳಗ್ಗೆ 10 ರ ನಂತರ ಪೂರ್ಣವತಿ , ಅಲಂಕಾರ ಬ್ರಾಹ್ಮಣರ ಸೇವೆ , 11 ರಿಂದ ಮಹಾಮಂಗಳಾರತಿ ನಡೆಯಲಿದೆ

ಸಾಂಸ್ಕೃತಿಕ ಕಾರ್ಯಕ್ರಮ
ಮಹಿಳಾ ವೃಂದ ಗುಂಡ್ಲುಪೇಟೆ ಇವರಿಂದ ಭಜನೆ ಹಾಗೂ ದೇವರ ನಾಮಗಳು , ಸಾಯಂಕಾಲ 6.30 ಕ್ಕೆ ರಥೋತ್ಸವ, ಉಯ್ಯಾಲೆ ಸೇವೆ, ಸ್ವಸ್ಥಿವಾಚನ , ಮಹಾಮಂಗಳಾರತಿ ನೇರವೇರಲಿದ್ದು . ಪ್ರತಿ ದಿನ ಮಧ್ಯಾಹ್ನ 12.30 ಕ್ಕೆ ಪ್ರಸಾದ ವಿನಿಯೋಗ ಮಾಡಲಾಗುವುದು ತಾಲೂಕಿನ ರಾಯರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಮೂರು ದಿನಗಳ ಕಾಲ ಮಠಕ್ಕೆ ಭೇಟಿ ನೀಡುವ ರಾಯರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ರಾಯರ ಮಠದ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಶ್ವರಿ ಚಂದ್ರಶೇಖರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

ವರದಿ: ಸದಾನಂದ ಕನ್ನೇಗಾಲ

error: